ಗದಗ: ನಗರದ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಮತ್ತು ಮಾರಾಟ ತಡೆಗಟ್ಟುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ತಾಲ್ಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಇಸ್ಮಾಯಿಲ್ ಉಮಚಗಿ ಮಾತನಾಡಿ, ‘ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟವು ಗದಗ-ಬೆಟಗೇರಿ ಅವಳಿ ನಗರದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಗದಗ ತಾಲ್ಲೂಕಿನ ಪ್ರತಿ ಗ್ರಾಮ ಹಾಗೂ ನಗರದ ಮನೆಗಳಿಗೆ ತೆರಳಿ ಪ್ರತಿ ಕೆ.ಜಿ ₹12ರಿಂದ ₹15ಗಳಂತೆ ಖರೀದಿಸಿದ ಅಕ್ಕಿಯನ್ನು ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ. ಅಕ್ರಮ ಅಕ್ಕಿ ಸಾಗಾಟ ತಡೆಯಬೇಕಾದ ಇಲಾಖೆ ಅಧಿಕಾರಿಗಳು ಸಾಗಾಟಗಾರರ ಜೊತೆ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

ಅಕ್ರಮ ಪಡಿತರ ಅಕ್ಕಿ ಸಂಗ್ರಹ ಹಾಗೂ ಸಾಗಾಟಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಇಲ್ಲವಾದರೇ ನಗರದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಖಾಜಾಸಾಬ ಕೊಪ್ಪಳ, ಅಸ್ಲಮ್ ಮಾಲದಾರ, ಸಾಧಿಕ ಚಿತವಾಡಗಿ, ಅನ್ವರ ಕೊಪ್ಪಳ, ಸಲೀಂ ಶಹಪೂರ, ಫಾರುಕ್ ದಂಡಿನ, ಸತೀಶ ರೋಣ, ಹೈದರಲಿ ಸವಣೂರ, ಮಹ್ಮದ್ ಅಲಿ, ಶಬೀರ ದ್ಯಾಪೂರ, ಹಮಾಯತ್, ಆಶೀಫ ಮಾಲದಾರ, ನೌವೀದ ಕಂಪ್ಲಿ, ರಸೂಲ ಬೇಪಾರಿ ಸೋಯಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.