ಗದಗ: ಇಲ್ಲಿನ ಬಿಂಕದಕಟ್ಟಿ ಮೃಗಾಲಯದಲ್ಲಿದ್ದ ಅನಸೂಯ ಹೆಸರಿನ 16.4 ವರ್ಷ ವಯಸ್ಸಿನ ಹೆಣ್ಣು ಹುಲಿ ಶನಿವಾರ ರಾತ್ರಿ ಮೃತಪಟ್ಟಿದೆ.

‘ವನ್ಯಜೀವಿಗಳ ಸಂರಕ್ಷಣೆ ಕಾಯ್ದೆ ನಿಯಮಾನುಸಾರ ಭಾನುವಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ‘ ಎಂದು ಗದಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್ ಕೆಂಚಪ್ಪನವರ ತಿಳಿಸಿದ್ದಾರೆ.

‘ಮೂರೂವರೆ ವರ್ಷ ಇದ್ದಾಗ ಈ ಹುಲಿಯನ್ನು ಮೈಸೂರಿನಿಂದ ಗದಗ ಮೃಗಾಲಯಕ್ಕೆ ಕರೆತರಲಾಗಿತ್ತು. ಮಾರ್ಗಮಧ್ಯದಲ್ಲಿ ಹುಲಿಯು ಬೋನಿನ ಸರಳುಗಳನ್ನು ಕಚ್ಚಿ ದವಡೆಗೆ ಗಾಯ ಮಾಡಿಕೊಂಡಿತ್ತು. ಹಾಗಾಗಿ, ಅದಕ್ಕೆ ಮಾಂಸವನ್ನು ಜಗಿದು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಕುಂದಿತ್ತು. ಸುಮಾರು 10 ವರ್ಷಗಳವರೆಗೂ ಅದಕ್ಕೆ ಕೀಮಾ ರೂಪದಲ್ಲೇ ಮಾಂಸವನ್ನು ಪೂರೈಸಲಾಗುತ್ತಿತ್ತು’ ಎಂದು ಆರ್ಎಫ್ಒ ಸ್ನೇಹಾ ಕೊಪ್ಪಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.