ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಾ ಯೋಜನೆ | 2 ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ಮಾನವ ದಿನ ಸೃಜನೆ

ಉಮೇಶ ಬಸನಗೌಡರ್
Published 30 ಜೂನ್ 2024, 6:25 IST
Last Updated 30 ಜೂನ್ 2024, 6:25 IST
ಅಕ್ಷರ ಗಾತ್ರ

ರೋಣ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯ 2024–25ನೇ ಸಾಲಿನಲ್ಲಿ ಎರಡೇ ತಿಂಗಳಲ್ಲಿ ರೋಣ ತಾಲ್ಲೂಕು ಪಂಚಾಯಿತಿ ನಿಗದಿತ ಗುರಿಯಲ್ಲಿ ಶೇ 95ರಷ್ಟು ಮಾನವ ದಿನಗಳ ಸೃಜನೆ ಮಾಡುವ ಮೂಲಕ ರಾಜ್ಯದಲ್ಲೇ ಉತ್ತಮ ನರೇಗಾ ಕೆಲಸಗಳನ್ನು ಮಾಡಿರುವ ತಾಲ್ಲೂಕು ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ರಾಜ್ಯ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.

2024-25ರಲ್ಲಿ ರೋಣ ತಾ.ಪಂ 6,32,945 ಮಾನವ ದಿನಗಳನ್ನು ಸೃಜಿನೆ ಮಾಡುವ ನಿಗದಿತ ಗುರಿಯನ್ನು ನೀಡಲಾಗಿತ್ತು. ಆದರೆ ಎರಡು ತಿಂಗಳ ಅವಧಿಯಲ್ಲಿ 6,03,572 ಮಾಡಿ ಶೇ95 ರಷ್ಟು ಮಾನವ ದಿನಗಳ ಸೃಜನೆ ಮಾಡುವ ಮೂಲಕ ಸಾಧನೆ ಮಾಡಿದೆ.

ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸ ಪಡೆಯುವ ಹಕ್ಕು ನೀಡುವುದಷ್ಟೇ ಅಲ್ಲದೇ ಸಾಕಷ್ಟು ರೈತರಿಗೆ ತಮ್ಮದೇ ಜಮೀನಿನಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವ ಕೆಲಸಗಳನ್ನು ಮಾಡಿಕೊಂಡು ಅವರ ಜಮೀನಿನ ಉತ್ಪಾದಕತೆಯನ್ನು ಹೆಚ್ಚಿಸಿ, ಅವರ ಕುಟುಂಬಕ್ಕೆ ಜೀವನೋಪಾಯದ ಮಾರ್ಗಗಳನ್ನು ಬಲಪಡಿಸಲು ನರೇಗಾ ಸಹಕಾರಿಯಾಗುತ್ತದೆ.

ಗ್ರಾಮೀಣ ಭಾಗಗಳಲ್ಲಿ ನರೇಗಾ ಯೋಜನೆಯ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಹಾಗೂ ಮಾಹಿತಿಯನ್ನು ಕೊಡುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದ್ದು, ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿಯೂ ನರೇಗಾ ಯೋಜನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.

ಎಸ್ ಕೆ ಇನಾಮದಾರ ಕಾರ್ಯನಿರ್ವಹನಾಧಿಕಾರಿಗಳು ತಾ ಪಂ ರೋಣ
ಎಸ್ ಕೆ ಇನಾಮದಾರ ಕಾರ್ಯನಿರ್ವಹನಾಧಿಕಾರಿಗಳು ತಾ ಪಂ ರೋಣ
ರಿಯಾಜ್ ಖತೀಬ್ ಸಹಾಯಕ ನಿರ್ದೇಶಕರು ತಾಲ್ಲೂಕು ಪಂಚಾಯತ ರೋಣ
ರಿಯಾಜ್ ಖತೀಬ್ ಸಹಾಯಕ ನಿರ್ದೇಶಕರು ತಾಲ್ಲೂಕು ಪಂಚಾಯತ ರೋಣ

ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆ ಮಾಹಿತಿ ವರ್ಷ; ಮಾನವ ದಿನಗಳು 2019-20;8,85,7372020-21;6,11,5742021-22;9,29,5212022-23;4,98,8782023-24;7,63,7622024-25; 6,03,572 (ಜೂನ್‌ 27ರವರೆಗೆ)

ನರೇಗಾ ತಂಡದ ಪ್ರೋತ್ಸಾಹದಿಂದ ಈ ಗುರಿ ಸಾಧನೆ ಮಾಡಿದ್ದೇವೆ ತಾಲ್ಲೂಕು ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿ ಇದರಲ್ಲಿ ತೊಡಗಿಸಿಕೊಂಡಿದ್ದು ಶ್ಲಾಘನೀಯ ಎಸ್.ಕೆ. ಇನಾಮದಾರ ಕಾರ್ಯ ನಿರ್ವಾಹಕ ಅಧಿಕಾರಿ ರೋಣ ತಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT