ಗಜೇಂದ್ರಗಡ: ಜಿಲ್ಲೆಯ ವಾಣಿಜ್ಯ ನಗರಿ ಎಂಬ ಖ್ಯಾತಿ ಪಡೆದಿರುವ ಗಜೇಂದ್ರಗಡ ಪಟ್ಟಣ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಆದರೆ, ಇಲ್ಲಿನ ಹಲವು ಬಡಾವಣೆಗಳಲ್ಲಿನ ಜನರಿಗೆ ಈವರೆಗೂ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದ್ದು, ಅವ್ಯವಸ್ಥೆ ಕಾರಣದಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಪಟ್ಟಣದಲ್ಲಿ 23 ವಾರ್ಡ್ಗಳಿದ್ದು, 50 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಪುರಸಭೆಗೆ ಒಟ್ಟು ₹1.85 ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉತ್ತಮ ರಸ್ತೆ, ಚರಂಡಿ, ಬೀದಿದೀಪ ಸೇರಿದಂತೆ ಮೂಲಸೌಕರ್ಯಗಳಿಲ್ಲ. ಮುಖ್ಯ ರಸ್ತೆಗಳು ಸೇರಿದಂತೆ ಒಳರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಗುಂಡಿಗಳಲ್ಲಿ ಮಳೆ ನೀರು, ಕೊಳಚೆ ನೀರು ಶೇಖರಣೆಯಾಗಿ ಈ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು, ಪಾದಚಾರಿಗಳು ಹರಸಾಹಸ ಪಡುವಂತಾಗಿದೆ.

ಗಜೇಂದ್ರಗಡ-ಕುಷ್ಟಗಿ ಮುಖ್ಯರಸ್ತೆಯಿಂದ ಪುರಸಭೆ ಸಂಪರ್ಕಿಸುವ ರಸ್ತೆ, ಬಿಎಸ್ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಕ್ಕದ ರಸ್ತೆ, ಹೊನವಾಡ ಪ್ಲಾಟ್, ಮ್ಯಾಗೇರಿಯವರ ಪ್ಲಾಟ್, ಸಿಂಹಾಸನದ ಪ್ಲಾಟ್, ರಾಯಬಾಗಿಯರವ ಪ್ಲಾಟ್, ಜವಳಿ ಪ್ಲಾಟ್ 3ನೇ ಹಂತ, ಬಳೂಟಗಿಯವರ ಪ್ಲಾಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿವೆ. ಹಲವು ಬಡಾವಣೆಗಳಲ್ಲಿನ ಖಾಲಿ ನಿವೇಶನಗಳಲ್ಲಿ ಕೊಳಚೆ ನೀರು ಶೇಖರಣೆಯಾಗಿ ಗಬ್ಬೆದ್ದು ನಾರುತ್ತಿದೆ.

ಪಟ್ಟಣದ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದ ಚರಂಡಿ ಕುಸಿದಿದ್ದು, ಅದರಲ್ಲಿ ಜನರು ಕಸ ಹಾಕುತ್ತಿರುವುದರಿಂದ ಕಸದ ತೊಟ್ಟಿಯಾಗಿದೆ. ಅಲ್ಲದೆ ಪುರಸಭೆ ಪೌರಕಾರ್ಮಿಕರು ನಿಯಮಿತವಾಗಿ ಸ್ವಚ್ಛತೆ ಮಾಡುತ್ತಿದ್ದರೂ ಪಟ್ಟಣದ ವಿವಿಧ ಓಣಿಗಳಲ್ಲಿ ಜನರು ಕಸ ಒಂದೆಡೆ ಸುರಿಯುತ್ತಿರುವುದರಿಂದ ಅಲ್ಲಲ್ಲಿ ತಿಪ್ಪೆಗಳು ನಿರ್ಮಾಣವಾಗುತ್ತಿವೆ. ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಜವಳಿ ಪ್ಲಾಟ್ಗೆ ಸಂಪರ್ಕಿಸುವ ರಸ್ತೆಯಲ್ಲಿ ಜನರು ಕಸ ಎಸೆಯುತ್ತಿರುವುದರಿಂದ ಕಸದ ರಾಶಿ ಬಿದ್ದಿರುವುದು ಸಾಮಾನ್ಯವಾಗಿದೆ.

ಉದ್ಯಾನಗಳ ಸ್ಥಿತಿ ಅಧ್ವಾನ!: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಮರಗಳು ಸಮೃದ್ಧವಾಗಿ ಬೆಳೆದು ಸ್ಥಳೀಯ ಜನರಿಗೆ ನೆರಳು, ತಂಪಾದ ಗಾಳಿ ನೀಡಬೇಕಿದ್ದ ಉದ್ಯಾನಗಳ ಸ್ಥಿತಿ ಅಧ್ವಾನವಾಗಿದ್ದು, ಮರಗಳ ಬದಲು ಜಾಲಿ ಕಂಟಿಗಳು ಬೆಳೆದಿವೆ.

ಪಟ್ಟಣದಲ್ಲಿ 32 ಉದ್ಯಾನಗಳಿವೆ. ಅವುಗಳಲ್ಲಿ 2-3 ಮಾತ್ರ ಸುಸ್ಥಿತಿಯಲ್ಲಿದ್ದು, ಕೆಲವು ಕಡೆಗಳಲ್ಲಿ ಉದ್ಯಾನದ ಸುತ್ತಲು ಕಾಂಪೌಂಡ್ ನಿರ್ಮಿಸಲಾಗಿದೆ. ಉಳಿದ ಬಹುತೇಕ ಉದ್ಯಾನಗಳಲ್ಲಿ ಮರಗಳ ಬದಲು ಜಾಲಿ ಕಂಟಿಗಳು ಬೆಳೆದು ನಿಂತು ಹಂದಿಗಳ ಆವಾಸ ಸ್ಥಾನಗಳಾಗಿವೆ.

ಖಾಲಿ ನಿವೇಶನಗಳಿಂದ ಕಿರಿಕಿರಿ: ಪಟ್ಟಣದ ಹಲವು ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಮುಳ್ಳುಕಂಟಿಗಳು ಬೆಳೆದು ಹಂದಿಗಳ ಆವಾಸ ಸ್ಥಾನವಾಗುವುದರ ಜೊತೆಗೆ ಕಸ ವಿಲೇವಾರಿ ಮಾಡುವ ಕೇಂದ್ರಗಳಾಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಕೊಳಚೆ ನೀರು ಸಂಗ್ರಹವಾಗುವ ಗುಂಡಿಗಳಾಗಿ ಮಾರ್ಪಟ್ಟಿವೆ. ಪಟ್ಟಣದ ಗೋಲಗೇರಿ ಪ್ಲಾಟ್, ಬಳೂಟಗಿಯವರ ಪ್ಲಾಟ್, ಜವಳಿ ಪ್ಲಾಟ್ 3ನೇ ಹಂತ ಸೇರಿದಂತೆ ಹಲವು ಕಡೆಗಳಲ್ಲಿ ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಖಾಲಿ ನಿವೇಶನಗಳಲ್ಲಿ ಶೇಖರಣೆಯಾಗಿ ಗಬ್ಬೆದ್ದು ನಾರುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳು ಸೊಳ್ಳೆ ಕಾಟ ಹಾಗೂ ರೋಗ-ರುಜಿನದ ಭೀತಿ ಎದುರಿಸುತ್ತಿದ್ದಾರೆ.

ಯಾರು ಏನಂತಾರೆ?

ಅಸಹನೀಯ ವಾತಾವರಣ

ಗಜೇಂದ್ರಗಡದ ಹೊನವಾಡ ಅವರ ಪ್ಲಾಟ್ನಲ್ಲಿ ಗುಣಮಟ್ಟದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಅಲ್ಲದೆ ಬೀದಿದೀಪಗಳೂ ಸಹ ಇಲ್ಲ. ಹೀಗಾಗಿ ಸಂಜೆ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಓಡಾಡುವುದು ಕಷ್ಟವಾಗಿದೆ. ಮಣ್ಣಿನ ರಸ್ತೆ ತುಂಬ ಗುಂಡಿಗಳಿದ್ದು, ಕೊಳಚೆನೀರು ತುಂಬಿಕೊಂಡಿದೆ. ಇಲ್ಲಿ ವಾಸ ಮಾಡುವುದು ಅಸಹನೀಯವಾಗಿದೆ.

–ಸುಭಾಷ್ ಶಂಕರಪ್ಪ ಬಡಿಗೇರ, ಹೊನವಾಡ ಪ್ಲಾಟ್ ನಿವಾಸಿ

ಮೂಲಸೌಕರ್ಯ ಕಲ್ಪಿಸಿಲ್ಲ

35 ವರ್ಷಗಳ ಹಿಂದೆ ಭೂ ಪರಿವರ್ತನೆಯಾಗಿರುವ ಹೊನವಾಡ ಪ್ಲಾಟ್ನಲ್ಲಿ ಸದ್ಯ ಸುಮಾರು 50 ಮನೆಗಳಿವೆ. ಆದರೆ, ಪುರಸಭೆಯಿಂದ ಈವರೆಗೂ ಪ್ಲಾಟ್ನಲ್ಲಿ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

–ನವೀನ ಹೊನವಾಡ, ಬಡಾವಣೆ ಮಾಲೀಕ, ಗಜೇಂದ್ರಗಡ

ದೂರಿಗೆ ಸ್ಪಂದಿಸದ ಪುರಸಭೆ

ಗಜೇಂದ್ರಗಡದ ಬಳೂಟಗಿ ಪ್ಲಾಟ್ನಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಕೊಳಚೆನೀರು ಸರಾಗವಾಗಿ ಹರಿದು ಹೋಗದೆ ಎಲ್ಲೆಂದರಲ್ಲಿ ಶೇಖರಣೆಯಾಗಿ ಗಬ್ಬೆದ್ದು ನಾರುತ್ತಿದೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕ ಹಾಗೂ ಲಿಖಿತ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

–ಅಮರೇಶ ಗೌರಿಮಠ, ಗಜೇಂದ್ರಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.