ಗದಗ: ಅವಳಿ ನಗರ ಗದಗ ಬೆಟಗೇರಿಯ ಜನತೆ ಗಣೇಶ ಚತುರ್ಥಿಯನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಿದರು. ಪ್ರಥಮಪೂಜಿತ ವಿಘ್ನೇಶ್ವರನಿಗೆ ಮನೆಮನೆಯಲ್ಲೂ ಪೂಜೆ ನಡೆಯಿತು. ಗಣೇಶ ದೇವಸ್ಥಾನಗಳಲ್ಲಿ ಜನದಟ್ಟಣೆ ಅಧಿಕವಾಗಿತ್ತು.

ಬುಧವಾರ ಬೆಳಿಗ್ಗೆಯಿಂದಲೇ ಚೌತಿ ಸಂಭ್ರಮ ಗರಿಗೆದರಿತ್ತು. ಹೊಸ ದಿರಿಸು ಧರಿಸಿ ಚಿಣ್ಣರು, ವಯಸ್ಕರು ಗಣಪನನ್ನು ತರಲು ಮಾರುಕಟ್ಟೆಗೆ ತೆರಳಿದರು. ನಗರದ ಎಪಿಎಂಸಿ ಆವರಣದಲ್ಲಿ ಮಾರಾಟಕ್ಕಿದ್ದ ಗಣೇಶ ಮೂರ್ತಿಗಳ ಪೈಕಿ ಮನಸ್ಸಿಗೊಪ್ಪಿದ ಗಣಪನನ್ನು ಖರೀದಿಸಿದರು. ಶಾಸ್ತ್ರೋಕ್ತ ರೀತಿಯಲ್ಲಿ ಗಣಪನನ್ನು ಕರೆತಂದು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು.

ಇತ್ತ, ಸಂಘ ಸಂಸ್ಥೆಗಳು ದೊಡ್ಡ ಪೆಂಡಾಲ್ ಸಿದ್ಧಪಡಿಸಿದ್ದರು. ಮುಹೂರ್ತ ನೋಡಿಕೊಂಡು ಬೃಹತ್ ಗಣೇಶ ಮೂರ್ತಿಗಳನ್ನು ಅರ್ಚಕರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿದರು. ನಗರದ ಬಹುತೇಕ ಓಣಿಗಳಲ್ಲಿ ಬೃಹದಾಕಾರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಕಂಡುಬಂತು.

ಚಿಕ್ಕ ಮೂರ್ತಿಗಳನ್ನು ಮನೆಗಳಲ್ಲಿ ಕೂರಿಸಿದ್ದವರು ಸಂಜೆವರೆಗೆ ಪೂಜಿಸಿ, ರಾತ್ರಿ ವಿಸರ್ಜನೆ ಮಾಡಿದರು. ಬೀಳ್ಕೊಡುವಾಗ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಂಘ ಸಂಸ್ಥೆಗಳು ಐದು ದಿನ, ಏಳು, ಒಂಬತ್ತು, 11 ದಿನಗಳ ಕಾಲ ಗಣೇಶನನ್ನು ಪೂಜಿಸುತ್ತಾರೆ. ಹಾಗಾಗಿ, ದೊಡ್ಡ ಗಣಪತಿಗಳು ನಗರದಲ್ಲಿ ಭಕ್ತರನ್ನು ಆಕರ್ಷಿಸುತ್ತಿವೆ.

ಬೆಟಗೇರಿಯ ಪಾಲಾ ಬಾದಮಿ ರಸ್ತೆಯಲ್ಲಿರುವ ವಿದ್ಯಾರಣ್ಯ ಯುವಕ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ 51 ಕುಂಭ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಗಜಾನನ ಪ್ರತಿಷ್ಠಾಪನೆ ಮಾಡಲಾಯಿತು.

ಬುಧವಾರ ಬೆಳಿಗ್ಗೆ 8ಕ್ಕೆ ಆರಂಭಗೊಂಡ ಕುಂಭ ಮೆರವಣಿಗೆ ರಂಗಪ್ಪಜ್ಜನ ಮಠದಿಂದ ಪಿ.ಬಿ. ರಸ್ತೆ ಮುಖಾಂತರ ಗೊಡಬಿ ಓಣಿಗೆ ತಲುಪಿತು. ನಂತರ ಗಜಾನನ ಪ್ರಷ್ಠಾಪನೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ನೂರಾರು ಭಕ್ತಾಧಿಗಳು ಭಾಗವಹಿಸಿದ್ದರು.

ಪ್ರತಿದಿನ ಸಂಜೆ 6ರಿಂದ ರಾತ್ರಿ 11ರವರೆಗೆ ‘ದಕ್ಷಯಜ್ಞ’ ಎಂಬ ಪೌರಾಣಿಕ ಸನ್ನಿವೇಶ ಪ್ರದರ್ಶನ ಆಯೋಜಿಸಲಾಗಿದೆ ಎಂದು ಯುವಕ ಸಂಘದ ಸಣ್ಣಚೌಡಪ್ಪ ಮಾಂತಗೊಂಡ, ನಾರಾಯಣ ಐಲಿ ತಿಳಿಸಿದ್ದಾರೆ.

ಪಂ.ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಎಪಿಎಂಸಿ ಯಾರ್ಡ್, ಗದಗ ದಲಾಲ ವರ್ತಕರ ಹಾಗೂ ಖರೀದಿದಾರರ ಸಂಘದ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಆಕರ್ಷಕ ಗಣೇಶನನ್ನು ಕೂರಿಸಲಾಗಿದೆ.

ಬುಧವಾರ ನಗರದ ಮಸಾರಿ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಎಪಿಎಂಸಿ ಮಾರುಕಟ್ಟೆವರೆಗೆ ವಾದ್ಯ ಮೇಳದೊಂದಿಗೆ ಗಣೇಶನ ಭವ್ಯ ಮೆರವಣಿಗೆ ಜರುಗಿತು.

ನಂತರ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಫಲ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಣೇಶನ ಮೆರವಣಿಗೆ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಗಜಾನನೋತ್ಸವ ಟ್ರಸ್ಟ್ ಕಮಿಟಿ ಅಧ್ಯಕ್ಷ ತಿಮ್ಮರೆಡ್ಡಿ ಕೋನರೆಡ್ಡಿ, ಗೌರವ ಅಧ್ಯಕ್ಷ ಪ್ರಮೋದ್ ವಾರಕರ, ಕಾರ್ಯದರ್ಶಿ ರಾಜು ಮುಧೋಳ, ಉಪಾಧ್ಯಕ್ಷ ರಾಜು ಮೂಲಿಮನಿ, ಸಹ ಕಾರ್ಯದರ್ಶಿ ಚಂದ್ರಕಾಂತ ಸವದತ್ತಿ, ಖಜಾಂಚಿ ಮಹೇಶ ಗಾಣಗೇರ, ಸಹ ಖಜಾಂಚಿ ನಿತೀಶ ವಾಲಿ, ವಿನಾಯಕ ವಜ್ರೇಶ್ವರಿ, ವಿವೇಕಾನಂದ ಗುಡಿಮನಿ, ಕೊಟ್ರೇಶ ಬಾಳಿಕಾಯಿ, ಗಿರೀಶ ಅಳವಂಡಿ, ದಯಾನಂದ ದುಂಡಪ್ಪನವರ, ವಿನಯ ಕಾಡಪ್ಪನವರ, ಬಸವರಾಜ ಕಾಡಪ್ಪನವರ, ಪ್ರವೀಣ, ವಿನೀತ ಕವಲೂರ, ಶರತ್ ಅಗಡಿ, ಸಾಗರ ವಜ್ರೇಶ್ವರಿ, ಅಜೀತ ಪುಣೇಕರ್, ಬಸವರಾಜ ಬಾವಿಕಟ್ಟಿ ಇದ್ದರು.

ನಗರದ ವಿವಿಧ ಭಾಗಗಳಲ್ಲಿ ಥೀಮ್ ಆಧರಿತ ಗಣೇಶ ಮೂರ್ತಿಗಳನ್ನು ಸಹ ಕೂರಿಸಲಾಗಿದ್ದು, ಇವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.

Cut-off box - ನಿರ್ದಿಷ್ಟ ಸ್ಥಳದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಗದಗ: ಗಣೇಶ ಚತುರ್ಥಿ ಪ್ರಯುಕ್ತ ಆಗಸ್ಟ್ 27ರಿಂದ ಸೆಪ್ಟೆಂಬರ್ 7ರವರೆಗೆ ಜಿಲ್ಲೆಯ ನಗರ ಪಟ್ಟಣ ಗ್ರಾಮೀಣ ಪ್ರದೇಶಗಳಲ್ಲಿ ನಿಗದಿ ಪಡಿಸಿದ ಸ್ಥಳಗಳಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಅನಧಿಕೃತ ಪಟಾಕಿ ಅಂಗಡಿಗಳವರು ವ್ಯಾಪಾರ ಮಾಡುವುದನ್ನು ನಿರ್ಬಂಧಿಸಿದೆ. ಲಕ್ಲ್ಕೇಶ್ನರ ತಾಲ್ಲೂಕಿನ ಉಮಾ ಮಹಾವಿದ್ಯಾಲಯದ ಕ್ರೀಡಾಂಗಣ ಶಿಗ್ಲಿಯ ಹೊಸ ಬಸ್ ನಿಲ್ದಾಣದ ಹತ್ತಿರದ ಬಯಲು ಜಾಗೆ; ಶಿರಹಟ್ಟಿ ತಾಲೂಕಿನಲ್ಲಿ ಶಿರಹಟ್ಟಿಯ ಎಫ್.ಎಂ.ಡಬಾಲಿ ಹೈಸ್ಕೂಲ್ ಮೈದಾನ ಹಾಗೂ ಬೆಳ್ಳಟ್ಟಿಯ ಯೋಗಿ ವೇಮನ ಪ್ರೌಢಶಾಲೆ ಮೈದಾನ: ಮುಂಡರಗಿ ತಾಲ್ಲೂಕಿನಲ್ಲಿ ಮುಂಡರಗಿ ತಾಲ್ಲೂಕು ಕ್ರೀಡಾಂಗಣ; ರೋಣ ತಾಲ್ಲೂಕಿನಲ್ಲಿ ರೋಣದ ಜಕ್ಕಲಿ ರಸ್ತೆಯಲ್ಲಿ ಬರುವ ಸೊಸೈಟಿಯ ಬಯಲು ಜಾಗೆ ಹಾಗೂ ಹೊಳೆಆಲೂರದ ಎಪಿಎಂಸಿ ಬಯಲು ಜಾಗೆ ಹೊಳೆಆಲೂರ; ಗಜೇಂದ್ರಗಡ ತಾಲ್ಲೂಕಿನಲ್ಲಿ ಗಜೇಂದ್ರಗಡದ ಸಂತೋಷ ತಂದೆ ಶ್ಯಾಮಸುಂದರ ಮಂತ್ರಿ ಇವರ ಖುಲ್ಲಾ ಜಾಗೆ ನರೇಗಲ್ನ ಎಪಿಎಂಸಿ ಗೌಡಾನ್ ಹತ್ತಿರ ಬಯಲು ಜಾಗೆ; ನರಗುಂದ ತಾಲ್ಲೂಕಿನಲ್ಲಿ ನರಗುಂದ ದಂಡಾಪೂರದ ಶ್ರೀರಾಮ ಮಂದಿರದ ಪಕ್ಕ ಇರುವ ಸರ್ಕಾರಿ ಜಾಗೆ; ಗದಗ ತಾಲೂಕಿನಲ್ಲಿ ವಿಡಿಎಸ್ಟಿ ಕಾಲೇಜು ಮೈದಾನ ಹಾಗೂ ಮುಳಗುಂದದ ಎಸ್ಜೆಜೆಎಂ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.