ಗಜೇಂದ್ರಗಡ: ತಾಲ್ಲೂಕಿನಲ್ಲಿ ರೈತರು ಬೆಳೆದ ಕಡಲೆ ಬೆಳೆ ಸದ್ಯ ಕಾಯಿ ಕಟ್ಟಿದ್ದು, ಕೆಲವು ರೈತರ ಜಮೀನುಗಳಲ್ಲಿ ತೇವಾಂಶ ಹೆಚ್ಚಾದ ಕಾರಣ ಬೆಲೆ ಸಿಡಿ ರೋಗಕ್ಕೆ ತುತ್ತಾಗುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಅಧಿಕ ಮಳೆಯಿಂದಾಗಿ ಹೆಸರು, ಗೋವಿನಜೋಳ ಬೆಳೆಗಳಿಗೆ ಹಾನಿಯಾಗಿದೆ. ಅದೇರೀತಿ ಕಡಲೆ ಬೆಳೆಗಳಿಗೂ ಸಿಡಿ ರೋಗ ಕಾಡುತ್ತಿದೆ. ಸಮೃದ್ಧವಾಗಿ ಬೆಳೆದು ಕಾಯಿ ಕಟ್ಟುತ್ತಿದ್ದ ಕಡಲೆ ಗಿಡಗಳು ಒಣಗುತ್ತಿವೆ. ಜೊತೆಗೆ ರಸ್ತೆ ಬದಿಯಲ್ಲಿರುವ ಕಡಲೆ ಜಮೀನುಗಳಿಗೆ ಕಳ್ಳರ ಕಾಟವು ಅಧಿಕವಾಗಿದ್ದು, ರಾತ್ರಿ ವೇಳೆ ಬೆಳೆ ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ.

‘ಮುಂಗಾರು ಬೆಳೆ ಹಾನಿಯಿಂದ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಸದ್ಯ ಜಮೀನುಗಳಲ್ಲಿ ಬೆಳೆದಿರುವ ಕಡಲೆ ಕಾಯಿ ಕಟ್ಟಿದ್ದು, ರಸ್ತೆ ಪಕ್ಕದ ಜಮೀನುಗಳಿಗೆ ರಾತ್ರಿ ವೇಳೆ ಬೈಕ್ಗಳಲ್ಲಿ ಬರುವ ಕಳ್ಳರು ಹಸಿ ಕಡಲೆ ಕಿತ್ತುಕೊಂಡು ಮಾರಾಟ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ರಾತ್ರಿ ಸಮಯದಲ್ಲಿ ಗಸ್ತು ಹಾಕುವ ಮೂಲಕ ಕಳ್ಳರ ಕಾಟ ತಪ್ಪಿಸಬೇಕು’ ಎಂದು ರೈತ ಮಹಮ್ಮದ್ರಫಿ ಮುಜಾವರ, ಶರಣಪ್ಪ ಪಾಟೀಲ ಅಲವತ್ತುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.