ಶನಿವಾರ, ಫೆಬ್ರವರಿ 22, 2020
19 °C
ಹುಯಿಲಗೋಳದಲ್ಲಿ ಪಾಳು ಬಿದ್ದ ನಾರಾಯಣರಾಯರ ಮನೆ

‘ಉದಯವಾಗಲಿ ಚೆಲುವ ಕನ್ನಡ ನಾಡು...’ ಬರೆದ ನಾರಾಯಣರಾಯರ ಸ್ಮಾರಕ ನಿರ್ಮಾಣ ಎಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯ ರಚನೆಕಾರ ಹುಯಿಲಗೋಳ ನಾರಾಯಣರಾಯರ ಸ್ಮಾರಕ ಭವನ ಗದುಗಿನಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು ಜಿಲ್ಲೆಯ ಜನತೆಯ ದಶಕಗಳ ಆಗ್ರಹ. ಆದರೆ, ಕರ್ನಾಟಕ ಏಕೀಕರಣಗೊಂಡು 63ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ರಾಜ್ಯದ ಜನತೆ ಸಿದ್ಧರಾದರೂ ಈ ಕನಸು ಸಾಕಾರಗೊಂಡಿಲ್ಲ.

ಸ್ವತಃ ನಾಟಕಕಾರರೂ ಆಗಿದ್ದ ಹುಯಿಲಗೋಳ ನಾರಾಯಣರಾಯರು, ಕರ್ನಾಟಕ ಏಕೀಕರಣ ಚಳವಳಿಗೆ ದೊಡ್ಡ ಕೊಡುಗೆ ನೀಡಿದವರು. ಅವರು ರಚಿಸಿದ ಈ ನೆಲದ ಮೊದಲ ನಾಡಗೀತೆಯನ್ನು 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ, ಆಗಿನ್ನೂ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್‌ ಅವರು ಹಾಡಿದ್ದರು.

ಗದಗ ತಾಲ್ಲೂಕಿನ ಹುಯಿಲಗೋಳದಲ್ಲಿರುವ ನಾರಾಯಣರಾಯರು ವಾಸವಿದ್ದ ಅವರ ಮನೆಯು ಸದ್ಯ ನೆರೆಗೆ ಸಿಕ್ಕು ನಲುಗಿದ ಸ್ಥಿತಿಯಲ್ಲಿದೆ. ಐತಿಹಾಸಿಕ ಹಿನ್ನೆಲೆಯ ಈ ಮನೆ ಸ್ಮಾರಕವಾಗಬೇಕಿತ್ತು. ಆದರೆ, ಅದರ ಕುರುಹು ಸಹ ಸಿಗದಂತೆ ಪಾಳುಬಿದ್ದಿದೆ.

ಜಿಲ್ಲಾಕೇಂದ್ರವಾದ ಗದುಗಿನಲ್ಲಿ ಕಾಟಾಚಾರಕ್ಕೆ ನಾರಾಯಣರಾಯರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಕಂಚಿನ ಪ್ರತಿಮೆ ನಿರ್ಮಿಸಬೇಕು ಎನ್ನುವುದು ಜನರ ಬೇಡಿಕೆಯಾಗಿತ್ತು. ಆದರೆ, ಹಿಂದಿನ ಸರ್ಕಾರ ಗದಗ ನಗರದ ಟಾಂಗಾಕೂಟ ಪ್ರದೇಶದಲ್ಲಿ ಸಿಮೆಂಟ್ ಪುತ್ಥಳಿ ನಿರ್ಮಿಸಿ ಕೈತೊಳೆದುಕೊಂಡಿತು. ನಾರಾಯಣರಾಯರ ಏಕೀಕರಣದ ಸಾಹಸಗಾಥೆ ಮೆರೆಯಬೇಕಾಗಿದ್ದ ಈ ವೃತ್ತವೂ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು