ಗದಗ: ‘ಶಾಸಕರ ಖರೀದಿಗೆ ಅವಕಾಶ ಇಲ್ಲ. ಶಾಸಕರ ಖರೀದಿ ವ್ಯಾಪಾರ ನಡೆಯುತ್ತಿದೆ ಅಂತ ನನಗೇನು ಅನ್ನಿಸಿಲ್ಲ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

‘ಈ ಕುರಿತ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ಗಮನಿಸಿದ್ದು, ಅವರು ರಾಜಕೀಯ ಬೆಳವಣಿಗೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ’ ಎಂದು ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಹೇಳಿದರು.

‘ಸಿ.ಎಂ., ಡಿಸಿಎಂ ‘ಮನಿ ಪವರ್’ ಬಳಸಿ ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹೇಳಿಕೆಗೆ, ‘ಸರ್ಕಾರ ಐದು ವರ್ಷ ಭದ್ರವಾಗಿರುತ್ತದೆ. ಊಹಾತ್ಮಕ ವಿಷಯ ಬಿಟ್ಟು, ವಾಸ್ತವ ಕುರಿತು ಮಾತನಾಡಲಿ’ ಎಂದು ತಿರುಗೇಟು ನೀಡಿದರು.

‘ಗ್ಯಾರಂಟಿ ಯೋಜನೆಗಳಿಂದ ಜನರಲ್ಲಿ ಸೋಮಾರಿತನ’ ಎಂಬ ರಂಭಾಪುರ ಶ್ರೀಗಳ ಹೇಳಿಕೆಗೆ ಅವರು, ‘ಯಾರು ಭಾರತೀಯರೋ, ಯಾರು ದೇಶಪ್ರೇಮಿಗಳೋ ಅವರು ಗ್ಯಾರಂಟಿ ವಿರುದ್ಧ ಮಾತನಾಡುವುದಿಲ್ಲ. ಸೋಮಾರಿ ಆಗುತ್ತಾರೆ ಅನ್ನುವುದನ್ನು ಒಪ್ಪಲಾಗದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.