ರೋಣ (ಗದಗ ಜಿಲ್ಲೆ): ಬುಧವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಹಲವು ಕಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ತುಂಬಿ ಹರಿಯುತ್ತಿರುವ ಹಳ್ಳಗಳಿಂದಾಗಿ ತಾಲ್ಲೂಕನ್ನು ಸಂಪರ್ಕಿಸುವ ಕೆಲವು ರಸ್ತೆಗಳು ಬಂದ್ ಆಗಿವೆ.

ಜೋರು ಮಳೆಗೆ ತಾಲ್ಲೂಕಿನ ಬಹುತೇಕ ಗ್ರಾಮಗಳ ಕೃಷಿ ಭೂಮಿ ಜಲಾವೃತವಾಗಿದ್ದು, ಬೆಳೆ ಹಾನಿಯಾಗಿದೆ.

ತಾಲ್ಲೂಕಿನ ರೈತರು ಮುಂಗಾರಿನ ಬೆಳೆಗಳಾದ ಹೆಸರು, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಕಬ್ಬು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದು, ಅಪಾರ ಹಾನಿ ಸಂಭವಿಸಿದೆ.

ಮುಂಗಾರು ಪೂರ್ವ ಮಳೆಯಿಂದಾಗಿ ಹರ್ಷಗೊಂಡಿದ್ದ ರೈತರು ಈಗಾಗಲೇ ಸಾಲ ಮಾಡಿ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದು ಎಡೆ ಹಂತಕ್ಕೆ ಬೆಳೆದಿರುವ ಬೆಳೆಗಳು ಸದ್ಯ ನೀರಿನಲ್ಲಿ ನಿಂತಿವೆ. ಜೊತೆಗೆ ಹಳ್ಳದ ಪಕ್ಕದ ಜಮೀನುಗಳಲ್ಲಿ ಅಳವಡಿಸಿರುವ ರೈತರ ಕೊಳವೆಬಾವಿ ಮತ್ತು ಮೋಟಾರ್ ಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರನ್ನು ಕಂಗಾಲಾಗಿಸಿದೆ.

ತಾಲ್ಲೂಕು ಕೇಂದ್ರವಾದ ರೋಣದಿಂದ ನರಗುಂದ ಸಂಪರ್ಕಿಸುವ ರಸ್ತೆಯ ಯಾವಗಲ್ ಸಮೀಪದ ಹಳ್ಳ ತುಂಬಿ ಹರಿಯುತ್ತಿದ್ದು ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಜೊತೆಗೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು ನರಗುಂದ ಪಟ್ಟಣಕ್ಕೆ ತೆರಳುವ ಮತ್ತು ನರಗುಂದದಿಂದ ರೋಣ ಪಟ್ಟಣಕ್ಕೆ ಬರುವ ವಾಹನಗಳು ನವಲಗುಂದ ಮಾರ್ಗದ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಹಳ್ಳಕ್ಕೆ ವ್ಯಾಪಕ ನೀರು ಬಂದಿದ್ದು ಸ್ಥಳಕ್ಕೆ ರೋಣ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ರೋಣ ಪೊಲೀಸ್ ಠಾಣೆ ಪಿಎಸ್ಐ ಪ್ರಕಾಶ ಬಣಕಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ, ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಯಾವಗಲ್ ಗ್ರಾಮ ಪಂಚಾಯಿತಿಗೆ ಸೂಚಿಸಿದ್ದಾರೆ.

ಮತ್ತೊಂದೆಡೆ ಜಿಲ್ಲೆಯ ನರಗುಂದ ಸೇರಿದಂತೆ ಬೆಳಗಾವಿ ಸಂಪರ್ಕಿಸುವ ರಸ್ತೆ ಮೆಣಸಗಿ ಗ್ರಾಮದ ಸಮೀಪ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು ರಸ್ತೆ ಮೇಲೆ ವ್ಯಾಪಕವಾಗಿ ಪ್ರವಹಿಸುತ್ತಿರುವ ಕಾರಣ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಜೊತೆಗೆ ಯಾವಗಲ್ ಗ್ರಾಮದಲ್ಲಿ ಮಳೆಯಿಂದಾಗಿ ಜನ ವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದು ಮನೆಯ ಗೋಡೆ ಕುಸಿದು ಬಿದ್ದ ಬಗ್ಗೆ ವರದಿಯಾಗಿದೆ.

ಮುಂದಿನ ಎರಡು ದಿನಗಳವರೆಗೆ ಮಳೆ ಮುಂದುವರಿಯುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆಯ ಮಾಹಿತಿಗಳು ಬರುತ್ತಿದ್ದು ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ.
.Karnataka Rains | ಮತ್ತೆ ಬಿರುಸುಗೊಂಡ ಮಳೆ, 9 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.