ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಚಿ ಬಳಗದ ಕಾರ್ಯಕ್ಕೆ ಶ್ಲಾಘನೆ

Published 15 ಫೆಬ್ರುವರಿ 2024, 16:01 IST
Last Updated 15 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ನರೇಗಲ್: ‘ಇಲ್ಲಿನ ಬೀಚಿ ಬಳಗದ ದಶಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಂಘಿಕ ಸಹಕಾರ ಕಾರಣವಾಗಿದೆ’ ಎಂದು ಬೀಚಿ ಬಳಗದ ಅಧ್ಯಕ್ಷ ಕೆ.ಎಸ್ ಕಳಕಣ್ಣವರ ಹೇಳಿದರು.

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಬುಧವಾರ ನಡೆದ ಬೀಚಿ ಬಳಗದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ಬೀಚಿ ಬಳಗವು ಇಲ್ಲಿನ ಸಾಹಿತ್ಯಿಕ ಚಟುವಟಿಕೆಗಳ ನಿರಂತರ ಕಾರ್ಯಕ್ರಮಗಳಿಂದ ಹೆಸರು ಪಡೆದಿದೆ. ಸ್ಥಳೀಯರ ಮನಸಲ್ಲಿ ಸ್ಥಿರಗೊಂಡಿದೆ. ಬಳಗದ ಕಾರ್ಯಕ್ರಮಗಳನ್ನು ಕಂಡು ಸುತ್ತಲಿನ ಗ್ರಾಮಗಳ ಸಾಹಿತ್ಯಾಸಕ್ತರು ಸದಸ್ಯತ್ವ ಪಡೆಯುತ್ತಿದ್ದಾರೆ’ ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ‘ಹತ್ತು ವರ್ಷಗಳಿಂದ ಸಾಹಿತ್ಯದ ವೇದಿಕೆ ಕಾಪಾಡಿಕೊಂಡು ಬಂದಿರುವುದು ಹಾಗೂ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಬಳಗದ ಕೋಶಾಧ್ಯಕ್ಷ ಶಿವಯೋಗಿ ಜಕ್ಕಲಿ ಲೆಕ್ಕ ಪತ್ರ ಮಂಡಿಸಿದರು. ರಾಜಶೇಖರಗೌಡ ಪಾಟೀಲ, ನಿಕಟಪೂರ್ವ ಅಧ್ಯಕ್ಷ ಸುರೇಶ ಹಳ್ಳಿಕೇರಿ, ನಿವೃತ್ತ ಪ್ರಾಚಾರ್ಯ ದೊಡ್ಡಯ್ಯ ಅರವಟಗಿಮಠ, ನಿವೃತ್ತ ಶಿಕ್ಷಕ ಎಂ.ಎಸ್ ದಢೇಸೂರಮಠ, ಜಿ.ಎ. ಬೆಲ್ಲದ, ಆರ್.ಕೆ.ಗಚ್ಚಿನಮಠ, ಸಿ.ಕೆ ಕೇಸರಿ, ಮುಖ್ಯಶಿಕ್ಷಕಿ ಭಾರತಿ ಶಿರ್ಸಿ, ಆರ್.ಎಸ್. ನರೇಗಲ್ಲ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ, ಮುಖ್ಯಶಿಕ್ಷಕ ಬಿ.ಬಿ.ಕುರಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ, ಎಚ್.ವಿ ಈಟಿ, ಜೆ.ಎ. ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT