ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಂಬಳ | ಎಟಿಎಂ ನಿರ್ವಹಣೆ ಕೊರತೆ: ಹಣ ಪಡೆಯಲು ಗ್ರಾಹಕರ ಪರದಾಟ

ಎರಡು ತಿಂಗಳಿನಿಂದ ಸ್ಥಗಿತ
Published 20 ಮೇ 2024, 15:12 IST
Last Updated 20 ಮೇ 2024, 15:12 IST
ಅಕ್ಷರ ಗಾತ್ರ

ಡಂಬಳ: ತಾಂತ್ರಿಕ ತೊಂದರೆ, ನಗದು ಖಾಲಿ, ಯಂತ್ರ ನ್ಯೂನ್ಯತೆ ಸೇರಿ ಮೊದಲಾದ ಸಮಸ್ಯೆಯಿಂದ ಗ್ರಾಹಕರು ಹಣ ಪಡೆಯಲು ಪರದಾಡುವಂತೆ ಆಗಿದೆ.

ಕೆಲವೆಡೆ ಎಟಿಎಂಗಳು ಆಗಾಗ್ಗೆ ಕೈಕೊಡುವುದು ಸಾಮಾನ್ಯವಾಗಿದೆ. ಡಂಬಳ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಗ್ರಾಮ ಪಂಚಾಯಿತಿ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‍ಬಿಐ ಎಟಿಎಂ ಸ್ಥಗಿತಗೊಂಡು ಎರಡು ತಿಂಗಳು ಕಳೆದರೂ ಅಗತ್ಯ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಹಕರು ಬ್ಯಾಂಕ್‍ನವರನ್ನು ಶಪಿಸುವಂತಾಗಿದೆ.

ಗ್ರಾಮೀಣ ಭಾಗದಲ್ಲಿ ಡಂಬಳ ಹೋಬಳಿ ಕೇಂದ್ರ, ದೊಡ್ಡ ಊರುಗಳಲ್ಲಿ ಮಾತ್ರ ಎಟಿಎಂ ಇರುತ್ತವೆ. ವಿಶೇಷವಾಗಿ ಡಂಬಳ ಗ್ರಾಮದಲ್ಲಿ ಮಾತ್ರ ಏಕೈಕ ಎಸ್‍ಬಿಐ ಎಟಿಎಂ ಸ್ಥಾಪನೆ ಮಾಡಲಾಗಿದ್ದು, ಹೋಬಳಿ ವ್ಯಾಪ್ತಿಯ 26 ಗ್ರಾಮಗಳ ಸಾರ್ವಜನಿಕರು ಗ್ರಾಮದ ಎಟಿಎಂ ಅನ್ನು ಹೆಚ್ಚು ಅಲವಂಬನೆ ಮಾಡಿಕೊಂಡಿದ್ದಾರೆ. ಕೆಲವೊಮ್ಮೆ ಗದಗ ಮತ್ತು ಮುಂಡರಗಿ ನಗರಕ್ಕೆ ಹೋಗಿ ಎಟಿಎಂ ಮೂಲಕ ಹಣ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಉಪತಶೀಲ್ದಾರ ನಾಡ ಕಾರ್ಯಲಯ ಡಂಬಳ ಗ್ರಾಮದಲ್ಲಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಾಡ ಕಚೇರಿ, ಕೃಷಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಗ್ರಾಮಸ್ಥರು ಡಂಬಳ ಗ್ರಾಮಕ್ಕೆ ಬರುತ್ತಾರೆ. ಬಹುತೇಕ ಗ್ರಾಹಕರು ಪ್ರಸ್ತುತ ದಿನಗಳಲ್ಲಿ ಎಟಿಎಂ ಉಪಯೋಗ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಎಟಿಎಂ ಹಲವು ಕಾರಣಾಂತರದಿಂದ ಸ್ಥಗಿತಗೊಂಡಿದ್ದರು ಬ್ಯಾಂಕ್ ಅಧಿಕಾರಿಗಳು ಅಗತ್ಯ ಕ್ರಮ ತಗೆದುಕೊಂಡಿಲ್ಲ.

ಡಂಬಳ ಹೋಬಳಿ ಕೇಂದ್ರಸ್ಥಾನವಾಗಿದ್ದರಿಂದ ಎಟಿಎಂ ಜನರಿಗೆ ತುಂಬಾ ಅವಶ್ಯಕತೆ ಇದೆ. ನಮ್ಮ ಗ್ರಾಮದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಕಾರ್ಯನಿರ್ವಹಿಸುತ್ತಿದ್ದು, ಎರಡು ಬ್ಯಾಂಕ್‌ಗಳಲ್ಲಿ ಸಾವಿರಾರು ಗ್ರಾಹಕರು ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಎಸ್‍ಬಿಐ ಎಟಿಎಂ ಶೀಘ್ರದಲ್ಲಿಯೇ ತಾಂತ್ರಿಕ ತೊಂದರೆ ಸರಿಪಡಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡದಿದ್ದರೆ ಹೋರಾಟ ಮಾಡುವುದಾಗಿ ಗ್ರಾಮದ ಮುಖಂಡರಾದ ಕುಬೇರಪ್ಪ ಬಂಡಿ ಮತ್ತು ಸಿದ್ದಪ್ಪ ಹಡಪದ ಎಚ್ಚರಿಕೆ ನೀಡಿದರು.

ಬ್ಯಾಂಕ್ ಅಧಿಕಾರಿಗಳೊಂದಿಗೆ ಎಟಿಎಂ ವಿಷಯ ಚರ್ಚಿಸಿ ಶೀಘ್ರದಲ್ಲಿಯೇ ಅಗತ್ಯ ಕ್ರಮ ತಗೆದುಕೊಳ್ಳಲಾಗುವುದು ತಹಶೀಲ್ದಾರ ಧನಂಜಯ ಮಾಲಗಿತ್ತಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT