ಮೂಲೆಗುಂಪಾದ ಸ್ಥಳೀಯ ಯಂತ್ರಗಳು; ಕೆಲಸವಿಲ್ಲದೇ ಕಂಗಾಲಾದ ರೈತ ಮಹಿಳೆಯರು
ಉಮೇಶ ಬಸನಗೌಡರ
Published : 11 ಆಗಸ್ಟ್ 2025, 2:39 IST
Last Updated : 11 ಆಗಸ್ಟ್ 2025, 2:39 IST
ಫಾಲೋ ಮಾಡಿ
Comments
ರೋಣ ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಮುಂಭಾಗದ ಖಾಲಿ ಜಮೀನುಗಳಲ್ಲಿ ನಿಂತಿರುವ ಬೃಹತ್ ಒಕ್ಕಣೆ ಯಂತ್ರಗಳು
ಸುಗ್ಗಿಯ ದಿನಗಳಲ್ಲಿ ರೈತರು ಹಟಕ್ಕೆ ಬಿದ್ದವರಂತೆ ನಮ್ಮ ಬೆನ್ನು ಬಿದ್ದು ರಾಶಿ ಮಾಡಲು ಕರೆದುಕೊಂಡು ಹೋಗುತ್ತಿದ್ದರು. ಯಂತ್ರಗಳು ಬಂದು ನಮ್ಮ ಕೆಲಸ ಕಸಿದಿವೆ. ಮುಂದೇನು ಎಂಬ ಚಿಂತೆ ಕಾಡುತ್ತಿದೆ
ಮಾದೇವಿ, ಕೃಷಿ ಕಾರ್ಮಿಕ ಮಹಿಳೆ
ಸರ್ಕಾರದ ಸಬ್ಸಿಡಿ ಹಣ ಜೊತೆಗೆ ದುಡಿದ ಹಣದಿಂದ ಒಕ್ಕಣೆ ಯಂತ್ರ ತಂದಿದ್ದೆವು. ಬೃಹತ್ ಒಕ್ಕಣೆ ಯಂತ್ರ ಖರೀದಿಸಲು ₹20 ಲಕ್ಷದಿಂದ₹25 ಲಕ್ಷ ಬೇಕು. ಅಷ್ಟು ದುಡ್ಡು ಎಲ್ಲಿಂದ ಬರಬೇಕು?