ಮುಂಡರಗಿ: ‘12ನೇ ಶತಮಾನದ ಶರಣೆಯರು ಕಾಯಕ, ದಾಸೋಹ ಹಾಗೂ ವಚನಗಳ ಮೂಲಕ ಸಮಾಜ ಸುಧಾರಣೆಗೆ ಯತ್ನಿಸಿದರು. ಶಿವಶರಣಿ ಹೇಮರಡ್ಡಿ ಮಲ್ಲಮ್ಮ ಕೃಷಿಯಲ್ಲಿ ಖುಷಿ ಕಂಡು ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸಿದರು’ ಎಂದು ಹರ್ಲಾಪುರದ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಡಂಬಳ ಗ್ರಾಮದ ಹೇಮರಡ್ಡಿ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡ ಶಿವಶರಣೆ ಹೇಮರಡ್ಡಿ ಮಲ್ಲಮ್ಮ 603ನೇ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕೌಟುಂಬಿಕ ಸಂಕಷ್ಟಗಳನ್ನು ಎದುರಿಸಿದ ಮಲ್ಲಮ್ಮ ಮನುಕುಲದ ಶ್ರೇಯಸ್ಸಿಗಾಗಿ ಶ್ರಮಿಸಿದಳು. ಅನನ್ಯ ದೈವಭಕ್ತಿ, ಕಾಯಕನಿಷ್ಠೆ, ಗುರುಲಿಂಗ ಜಂಗಮರಲ್ಲಿ ಭಕ್ತಿ ಹೊಂದಿದವಳು. ಅವರ ಆದರ್ಶಗಳನ್ನು ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಜಮಖಂಡಿ ಓಂಕಾರ ಆಶ್ರಮದ ಶ್ರೀದೇವಿತಾಯಿ ಮಾತನಾಡಿ, ‘ಶ್ರೀಶೈಲ ಮಲ್ಲಿಕಾರ್ಜುನನ ಮೇಲೆ ಅಪಾರ ನಂಬಿಕೆ ಹೊಂದಿದ್ದ ಮಲ್ಲಮ್ಮಳು ಭಾವನಾತ್ಮಕ ಜೀವಿ. ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಅವರು ಭಕ್ತಿ ಹಾಗೂ ಕಾಯಕಗಳಿಂದ ಸ್ತ್ರೀ ಕುಲದ ಗೌರವ ಹೆಚ್ಚಿಸಿದ್ದಾರೆ. ಮಲ್ಲಮ್ಮನ ವಿಚಾರಗಳು ವಿಶ್ವಮಾನ್ಯವಾಗಿವೆ. ಅವರ ಕೃಷಿ ಪ್ರೇಮವನ್ನು ನಾವೆಲ್ಲ ಅನುಸರಿಸಬೇಕು’ ಎಂದರು.

ರಾಜಶೇಖರಯ್ಯ ಹಿರೇಮಠ, ಜಿ.ವಿ. ಹಿರೇಮಠ, ವಿ.ಟಿ. ಮೇಟಿ, ವಿ.ಎಸ್. ಯರಾಶಿ, ಮುತ್ತಣ್ಣ ಕೊಂತಿಕಲ್ಲ, ಮಹೇಶ ಗಡಗಿ, ಮಹೇಶ ರಾಯರಡ್ಡಿ, ಮಲ್ಲಿಕಾರ್ಜುನ ಚಿಕ್ಕರಡ್ಡಿ, ಬಸುರಾಜ ಶಿರೋಳ, ವೆಂಕಟೇಶ ಯರಾಶಿ, ಮಲ್ಲಿಕಾರ್ಜುನ ಪ್ಯಾಟಿ, ಮಲ್ಲಣ್ಣ ಯರಾಶಿ, ಬಸವರಡ್ಡಿ ಬಂಡಿಹಾಳ, ಮಲ್ಲಣ್ಣ ಗಡಗಿ, ನಿಂಗರಡ್ಡಿ ಕೆಂಚರಡ್ಡಿ, ಈರಣ್ಣ ರಾಜೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.