ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮೂಹಿಕ ವಿವಾಹದಿಂದ ಅನಗತ್ಯ ಖರ್ಚು ಉಳಿತಾಯ: ಯಾವಗಲ್ಲ

Published : 12 ಸೆಪ್ಟೆಂಬರ್ 2024, 16:05 IST
Last Updated : 12 ಸೆಪ್ಟೆಂಬರ್ 2024, 16:05 IST
ಫಾಲೋ ಮಾಡಿ
Comments

ಬೆಳವಣಿಕಿ (ರೋಣ): ಸಮೀಪದ ಮಲ್ಲಾಪುರ ಗ್ರಾಮದ ಕದಳಿ ಮಠದಲ್ಲಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಈಚೆಗೆ ನಡೆಯಿತು.

ಬೆಳಿಗ್ಗೆ 6ಕ್ಕೆ ರುದ್ರಾಭಿಷೇಕ, ಬೆಳಿಗ್ಗೆ 8ಕ್ಕೆ ಕುಂಭಮೇಳ, ಸುಮಂಗಲಿಯರಿಂದ ಆರತಿ, ಶರಣಬಸವೇಶ್ವರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಮಾಜಿ ಶಾಸಕ ಬಿ.ಆರ್.ಯಾವಗಲ್ಲ ಮಾತನಾಡಿ, ‘ಉಚಿತ ಸಾಮೂಹಿಕ ವಿವಾಹ ಮಾಡುವುದರಿಂದ ಅನಗತ್ಯ ಖರ್ಚು ತಡೆಯಬಹುದು. ಎಲ್ಲರೂ ಕೂಡಿ ಇಂತಹ ಕಾರ್ಯ ಮಾಡುವುದರಿಂದ ಸಮಾಜದಲ್ಲಿ ಸಾಮರಸ್ಯ ನೆಲೆಸಲು ಸಾಧ್ಯ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನಿಡಗುಂದಿಕೊಪ್ಪ ಶಿವಯೋಗ ಮಂದಿರ ಶಾಖಾಮಠ ಸಿದ್ದರಾಮ ದೇವರು ಮಾತನಾಡಿ, ‘ಆಧುನಿಕ ಯುಗದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸುವುದರಿಂದ ಸಮಾಜದಲ್ಲಿ ಭಾವೈಕ್ಯ ಮೂಡಲು ಸಾಧ್ಯವಾಗುತ್ತದೆ. ಜನರಲ್ಲಿ ಸೇವಾ ಮನೋಭಾವನೆ ಮೂಡುತ್ತದೆ’ ಎಂದು ತಿಳಿಸಿದರು.

ನೆಹರೂ ಕಂಬಳಿ, ಶಂಕರ ಕಳಿಗೋಣ್ಣವರ, ಗುರುಮಲ್ಲಯ್ಯ ಪುರಾಣಿಕಮಠ, ಬಸಯ್ಯಶಾಸ್ತ್ರೀ ಭಿಕ್ಷಾವತಿಮಠ, ಶಂಕ್ರಯ್ಯ ಹಿರೇಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ವೈ.ಹುಲ್ಲೂರ, ಉಪಾಧ್ಯಕ್ಷೆ ಕರೆವ್ವ ಚಲವಾದಿ, ರಾಜಶೇಖರಯ್ಯ ಪುರಾಣಿಕಮಠ, ಮಹೇಶ ಸತ್ತಿಗೇರಿ, ಶರಣಪ್ಪ ರಬ್ಬನಗೌಡ, ಎಸ್.ಎಸ್.ಅರಹುಣಸಿ, ಮುತ್ತಪ್ಪ ಉಗಲಾಟ, ಬಸವಂತಪ್ಪ ಶಿರೋಳ, ಸಿದ್ದು ಸತ್ತಿಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT