ಗದಗ: ‘ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಆಗರವಾಗಿವೆ. ಸಿರಿಧಾನ್ಯಗಳ ನಿಯಮಿತ ಸೇವನೆಯಿಂದ, ಈಗಿನ ಜೀವನಶೈಲಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಬೊಜ್ಜು ಇತ್ಯಾದಿಗಳನ್ನು ಯಶಸ್ವಿಯಾಗಿ ನಿರ್ವಹಿಸಬಹುದಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ವಾಣಿಜ್ಯ ಮೇಳದ ಅಂಗವಾಗಿ ಕೃಷಿ ಇಲಾಖೆ, ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬುಧವಾರ ನಡೆದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಸುವುದರಿಂದ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಬಹುದು ಎಂದು ಹೇಳಿದರು.

ಪ್ರದರ್ಶನದಲ್ಲಿದ್ದ ಖಾದ್ಯಗಳನ್ನು ವೀಕ್ಷಿಸಿ, ರುಚಿ ಸವಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಸಾಂಪ್ರದಾಯಕವಾಗಿ ಸಿರಿಧಾನ್ಯಗಳನ್ನು ಬಳಸಿ ಹಲವು ಖಾದ್ಯಗಳನ್ನು ತಯಾರಿಸುವುದು ಕ್ಲಿಷ್ಟಕರ ಮತ್ತು ಶ್ರಮದಾಯಕ ಪ್ರಕ್ರಿಯೆ. ಆಸಕ್ತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.

ಗದಗ ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮಗಳಿಂದ ಒಟ್ಟು 73 ಸ್ಪರ್ಧಿಗಳು ವೈವಿಧ್ಯಮಯ ಹಾಗೂ ರುಚಿಕರವಾದ ವಿವಿಧ ಸಿರಿಧಾನ್ಯದ ಹಾಗೂ ಮರೆತು ಹೋದ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ಪ್ರದರ್ಶಿಸಿದ್ದರು.

ಸಿರಿಧಾನ್ಯದ ಸಿಹಿ ಖಾದ್ಯಗಳಲ್ಲಿ ವಿವಿಧ ಪಾಯಸಗಳು, ಹೋಳಿಗೆಗಳು, ಲಾಡುಗಳು, ಹಲ್ವಾ, ಕೇಕ್, ಪುಡ್ಡಿಂಗ್, ಸಿರಿಧಾನ್ಯ ಗಾರಿಗೆ, ಸಜ್ಜೆ ಉಂಡೆ ಮತ್ತು ಮಾಲ್ದಿ ಇತ್ಯಾದಿಗಳನ್ನು ತಯಾರಿಸಿ, ಆಕರ್ಷಕವಾಗಿ ಪ್ರದರ್ಶಿಸಿದ್ದರು.

ಸಿರಿಧಾನ್ಯದ ಖಾರದ ಖಾದ್ಯಗಳಲ್ಲಿ ರುಚಿಕರವಾದ ವಡೆಗಳು, ನುಚ್ಚು, ಅಂಬಲಿ, ಹಪ್ಪಳ, ಚಕ್ಕುಲಿ, ಕಿಚಡಿ, ರೊಟ್ಟಿಗಳು, ಜೋಳದ ಮುಟುಗಿ, ಎಣ್ಣೆಗಡುಬು, ಪುಲಾವ್, ದೋಸೆ, ಮಾಲ್ಟ್, ಸಾವಿ ಮೊಸರನ್ನ, ಉಂಡಗಡುಬು, ಜೋಳದ ಕಿಚಡಿ, ಜೋಳದ ಮಸಾಲೆ ರೊಟ್ಟಿ, ಬಾರ್ಲಿ ಪೊಂಗಲ್, ಸಿರಿಧಾನ್ಯ ನಿಪ್ಪಟ್ಟು ನೋಡುಗರನ್ನು ಸವಿಯಲು ಕೈ ಬೀಸಿ ಕರೆಯುತ್ತಿದ್ದವು.

ಇವುಗಳಲ್ಲದೇ ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ಪೌಷ್ಟಿಕವಾದ ಕೊರಲೆ ಅಕ್ಕಿ ಸಂಡಿಗೆ, ಕೋಡಬಳೆ, ಗೋದಿ ಗಾರಿಗೆ, ಆಣಿಕಲ್ಲು ಹುಗ್ಗಿ, ಹುರುಳಿ ಪಾಯಸ, ಗುಳ್ಳಡಿಕೆ ಉಂಡಿ, ಬೆಲ್ಲದ ಹೋಳಿಗೆ, ಅಗಸೆ ಉಂಡೆ, ಕೆಂಪು ಗೋಧಿ ಹಲ್ವಾ ಬಾಯಲ್ಲಿ ನೀರೂರಿಸುವಂತಿದ್ದವು.

ಸಿರಿಧಾನ್ಯದ ಸಿಹಿ ಖಾದ್ಯಗಳು, ಸಿರಿಧಾನ್ಯದ ಖಾರದ ಖಾದ್ಯಗಳು ಹಾಗೂ ಮರೆತು ಹೋದ ಖಾದ್ಯಗಳ ಮೂರು ವಿಭಾಗಗಳಲ್ಲಿ ತಲಾ ಮೂರು ಬಹುಮಾನಗಳನ್ನು ಪ್ರಮಾಣಪತ್ರಗಳೊಂದಿಗೆ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದವರು ಬರುವ ದಿನಗಳಲ್ಲಿ ಏರ್ಪಡಿಸುವ ರಾಜ್ಯಮಟ್ಟದ ಸಿರಿಧಾನ್ಯದ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಲು ತಿಳಿಸಲಾಯಿತು. ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಮುಖ್ಯಸ್ಥೆ ಸುಧಾ ಮಂಕಣಿ, ಆರ್ಡಿಪಿಆರ್ ವಿಶ್ವವಿದ್ಯಾಲಯದ ಸಾವಿತ್ರಿ ಬ್ಯಾಡಗಿ, ಕೃಷಿ ಇಲಾಖೆ ಡಿಸಿ ಸ್ಫೂರ್ತಿ ಜಿ.ಎಸ್. ನಿರ್ಣಾಯಕರಾಗಿ ಭಾಗವಹಿಸಿದ್ದರು.

ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಕೃಷಿ ಇಲಾಖೆ ಅಧಿಕಾರಿ ಮಂಜುನಾಥ ಭರಮಗೌಡರ ಇದ್ದರು. ಸೀಮಾ ಸವಣೂರ ಕಾರ್ಯಕ್ರಮ ನಿರ್ವಹಿಸಿದರು.

Quote - ಸ್ಪರ್ಧೆಯಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದು ಖುಷಿ ತರಿಸಿತು. ಎಲ್ಲಾ ಖಾದ್ಯಗಳು ಅತ್ಯುತ್ತಮವಾಗಿ ರುಚಿಕಟ್ಟಾಗಿದ್ದು ಬಹುಮಾನ ಪಡೆಯಲು ಅರ್ಹತೆ ಹೊಂದಿದ್ದವು –ಚೇತನಾ ಪಾಟೀಲ ಜಂಟಿ ಕೃಷಿ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.