ಮುಂಡರಗಿ: ಅತಿವೃಷ್ಡಿಯಿಂದ ನಾಶವಾದ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ವಿತರಣೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ರೈತರು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿಯ ಕೋಟೆ ಆಂಜನೇಯ ದೇವಸ್ಥಾನದಿಂದ ಎತ್ತು, ಚಕ್ಕಡಿಗಳೊಂದಿಗೆ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಒಂದು ಗಂಟೆ ಕಾಲ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರೈತರ ಜಮೀನುಗಳಲ್ಲಿ ಪವನ ಹಾಗೂ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಕಂಪನಿಗಳು ರೈತರಿಂದ 30 ವರ್ಷ ಕರಾರು ಪತ್ರ ಹಾಗೂ ಹಕ್ಕು ವರ್ಗಾವಣೆಗೂ ಸಹಿ ಪಡೆದುಕೊಳ್ಳುತ್ತಿದ್ದಾರೆ. ಕರಾರು ಪತ್ರವು ಅನ್ಯ ಭಾಷೆಯಲ್ಲಿದ್ದು, ಅದು ರೈತರಿಗೆ ತಿಳಿಯದಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಸೂರ್ಯಕಾಂತಿಗೆ ₹ 7,721 ಹಾಗೂ ಮೆಕ್ಕೆಜೋಳ ₹ 2,400 ಬೆಂಬಲ ಬೆಲೆ ಘೋಷಿಸಿದೆ ಆದರೆ, ಮಾರುಕಟ್ಟೆಯಲ್ಲಿ ಕ್ವಿಂಟಲ್ ಸೂರ್ಯಕಾಂತಿ ₹ 5 ಸಾವಿರ ಹಾಗೂ ಮೆಕ್ಕೆಜೋಳ ₹ 2ಸಾವಿರ ವರೆಗೆ ಮಾತ್ರ ಮಾರಾಟವಾಗುತ್ತಲಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು, ಸರ್ಕಾರ ತಕ್ಷಣ ಪಟ್ಟಣದಲ್ಲಿ ಬೆಳೆ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ.ಜಿ.ಎಸ್. ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚಿಸಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ, ಶರಣಪ್ಪ ಕಂಬಳಿ, ಹುಸೇನಸಾಬ್ ಕುರಿ, ಹುಚ್ಚಪ್ಪ ಹಂದ್ರಾಳ, ಎಲ್ಲಪ್ಪ ಡೋಣಿ, ಈರಣ್ಣ ಗಡಾದ, ಶರಣಪ್ಪ ಚನ್ನಳ್ಳಿ, ರಾಘವೇಂದ್ರ ಕುರಿ, ಮಹಾಂತೇಶ ಬಳ್ಳಾರಿ, ಅಶ್ವಿನಿ ಬೀಡನಾಳ, ಜ್ಯೋತಿ ಹಡಪದ, ಕಸ್ತೂರಿ ವೆಂಕಟಾಪೂರ, ಶಾರಮ್ಮ ಡುಮ್ಮಕ್ಕನವರ, ನಾಗಮ್ಮ ಹಳ್ಳಿಕೇರಿ ಇದ್ದರು.

ಬೆಳೆವಿಮೆ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದ್ದು ಅಧಿಕಾರಿಗಳೂ ಕೂಡ ಭಗಿಯಾಗಿರುವ ಸಾಧ್ಯತೆಯಿದೆ. ಇದರಿಂದಾಗಿ ಅರ್ಹ ರೈತರಿಗೆ ಸಕಾಲದಲ್ಲಿ ಬೆಳೆವಿಮೆ ದೊರೆಯದಾಗಿದೆ

ಶರಣಪ್ಪ ಕಂಬಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ

ಬೆಳೆಹಾನಿ ನೊಂದಣಿಗೆ ಸಲಹೆ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಅತೀ ಹೆಚ್ಚು ಮಳೆ ಸುರಿದಿದ್ದು 30 ಸಾವಿರ ಹೆಕ್ಟೆರ್ ಮೆಕ್ಕೆಜೋಳ 8 ಸಾವಿರ ಹೆಕ್ಟೆರ್ ಹೆಸರು ಸೇರಿದಂತೆ ಎಲ್ಲ ಬೆಳೆಗಳು ಹಾನಿಗೊಳಗಾಗಿವೆ. ಬೆಳೆಹಾನಿ ಪರಿಹಾರ ಕೋರಿ ಈವರೆಗೂ 11973 ರೈತರು ನೊಂದಣಿ ಮಾಡಿಕೊಂಡಿದ್ದಾರೆ. ಬೆಳೆಹಾನಿ ನೊಂದಣಿ ಮಾಡಿಕೊಳ್ಳಲು ಇಲಾಖೆ ಸೂಚಿಸಿರುವ ದೂರವಾಣಿ ಮೂಲಕ ರೈತರು ಬೆಳೆಹಾನಿ ನೊಂದಾಯಿಸಿಕೊಳ್ಳಬಹುದು. ರಾಜ್ಯ ಸರ್ಕಾರವು ನಮ್ಮ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಯೂರಿಯಾ ಪೂರೈಸಿದ್ದು ಹೆಚ್ಚು ಗೊಬ್ಬರ ಪೂರೈಕೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ರೈತರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.