ಮುಂಡರಗಿ: ‘ಮನುಷ್ಯ ಸದಾ ಗುರುಪೂಜೆ ಹಾಗೂ ಸತ್ಕಾರ್ಯ ಮಾಡುತ್ತ ತಮ್ಮ ಜನ್ಮವನ್ಮು ಸಾರ್ಥಕ ಪಡಿಸಿಕೊಳ್ಳಬೇಕು’ ಎಂದು ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಸಂಸ್ಕೃತ ಪಾಠಶಾಲೆಯಿಂದ ಆರಂಭವಾದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಂಸ್ಥೆ ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಭಕ್ತರಲ್ಲಿ ಸಂತಸ ಮೂಡಿಸಿದೆ’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಸ್. ಗುಡಿಮನಿ ಮಾತನಾಡಿ, ‘ಅನ್ನದಾನೀಶ್ವರ ಮಠ ಶತಮಾನದಿಂದ ನಾಡಿನ ಬಡ ಮಕ್ಕಳಿಗೆ ಅನ್ನ, ಆಶ್ರಯ ಹಾಗೂ ಅಕ್ಷರ ದಾಸೋಹ ನೀಡುತ್ತಿದೆ’ ಎಂದರು.

ಹೊಳಲಿನ ಚನ್ನಬಸವ ದೇವರು, ಆರ್.ಎಲ್. ಪೊಲೀಸ್ಪಾಟೀಲ ಮಾತನಾಡಿದರು. ಈ ವೇಳೆ ಭಕ್ತಿ ಸೇವೆ ವಹಿಸಿಕೊಂಡ ಲೀಲಾಕ್ಷಿ ಜಗ್ಗಿನ, ವೀರಯ್ಯ ಮುದುಗಲ್ಲಮಠ, ರಾಖೇಶ ಹಳ್ಳಿಗುಡಿ ಅವರನ್ನು ಸನ್ಮಾನಿಸಲಾಯಿತು.

ಚನ್ನವೀರಯ್ಯ ಹಿರೇಮಠ ಪ್ರಾರ್ಥನೆ ಹಾಡಿದರು. ಶ್ವೇತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
ಎಂ.ಜಿ. ಗಚ್ಚಣ್ಣವರ, ಎಸ್.ಬಿ. ಹಿರೇಮಠ, ಎಸ್.ಎನ್. ಡೊಣ್ಣಿ, ಎಸ್.ಸಿ. ಚಕ್ಕಡಿಮಠ, ಎಂ.ಎಸ್. ಶಿವಶೆಟ್ಟಿ, ಬಿ.ಜಿ. ಜವಳಿ, ವೀರನಗೌಡ ಗುಡದಪ್ಪನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.