ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru Dasara | ಸಬರಮತಿ ಆಶ್ರಮ, ಬ್ರಹ್ಮ ಜಿನಾಲಯ ಆಕರ್ಷಣೆ

ಮೈಸೂರು ದಸರಾದಲ್ಲಿ ಮೆಚ್ಚುಗೆ ಪಡೆದ ಸ್ತ‌ಬ್ದಚಿತ್ರಗಳ ಮೆರವಣಿಗೆ
Published 1 ನವೆಂಬರ್ 2023, 15:42 IST
Last Updated 1 ನವೆಂಬರ್ 2023, 15:42 IST
ಅಕ್ಷರ ಗಾತ್ರ

ಗದಗ: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ದಚಿತ್ರಗಳಲ್ಲಿ ಗದಗ ಜಿಲ್ಲೆಯ ಕಲಾವಿದರು ನಿರ್ಮಿಸಿದ ಸ್ತಬ್ದಚಿತ್ರಕ್ಕೆ ಜಿಲ್ಲಾ ಪಂಚಾಯ್ತಿ ವಿಭಾದ ಅಡಿ ಪ್ರಥಮ ಸ್ಥಾನ ಸಿಕ್ಕಿದೆ.

ಅಲ್ಲದೇ ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಸಬರಮತಿ ಆಶ್ರಮದ ಮಾದರಿಯನ್ನು ನಿರ್ಮಾಣ ಮಾಡಿ ಪ್ರದರ್ಶನ ಮಾಡಿದ್ದರು. ಅದು ಕೂಡ ನೋಡುಗರ ಮನಸ್ಸೆಳೆಯಿತು. ಜಂಬು ಸವಾರಿ ಮೆರವಣಿಗೆಯಲ್ಲಿ 31 ಜಿಲ್ಲೆಗಳ ವೈವಿಧ್ಯಮಯ ಸ್ತಬ್ದಚಿತ್ರಗಳು ಭಾಗವಹಿಸಿದ್ದವು.

ಗದಗ ಜಿಲ್ಲೆಯ ಕಲಾವಿದರು ಗದಗ, ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿ ಮೈಸೂರು ದಸರಾ ಜಂಬುಸವಾರಿ ಮೆರವಣಿಗೆಯಲ್ಲಿ ಪ್ರತಿ ವರ್ಷವೂ ವೈವಿಧ್ಯಮಯ ಸ್ತಬ್ದಚಿತ್ರಗಳನ್ನು ಪ್ರದರ್ಶನ ಮಾಡುತ್ತಾರೆ. ಅವರು ಮಾಡುವ ಸ್ತಬ್ದಚಿತ್ರಗಳಿಗೆ ಪ್ರತಿವರ್ಷವೂ ಬಹುಮಾನ ಬರುತ್ತಿರುವುದು ವಿಶೇಷವಾಗಿದೆ.

ಈ ವರ್ಷ ಪ್ರವಾಸೋದ್ಯಮ ಇಲಾಖೆ ಮತ್ತು ನಿಗಮಗಳ ವಿಭಾಗದ ಅಡಿಯಲ್ಲಿ ಗದಗ ಜಿಲ್ಲೆಯ ಲಕ್ಕುಂಡಿಯ ಬ್ರಹ್ಮಜಿನಾಲಯ ಮಾದರಿಯನ್ನು ಗದಗ ಜಿಲ್ಲೆಯ ಕಲಾವಿದರಾದ ರವಿ ಶಿಶ್ವಿನಹಳ್ಳಿ ಅವರ ಮುಂದಾಳತ್ವದಲ್ಲಿ ಫಕೀರೇಶ ಕುಳಗೇರಿ, ರಮಜಾನ ಮುತ್ತಣ್ಣವರ, ಜಿ.ಕೆ.ಬಡಿಗೇರ, ಶಶಿಧರ ಗರಗ, ವೆಂಕೋಬಾ ಕಗ್ಗಲ್ಲ, ರಮೇಶ ಗಾರವಾಡ, ರವಿ ಗಚ್ಚಿನಮನಿ, ಶಿವು, ವಿನಾಯಕ ಮೊದಲಾದವರು ತಮ್ಮ ಭಾವಗಳಿಗೆ ಗೆರೆಗಳ ಮೂಲಕ, ಬಣ್ಣಗಳ ಮೂಲಕ ಭಾವ ತುಂಬಿ ಸ್ತಬ್ದಚಿತ್ರ ನಿರ್ಮಿಸಿ, ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ.

ಮುಂದುವರಿದು, ಮೈಸೂರು ರಾಜ್ಯಕ್ಕೆ ಕರ್ನಾಟಕ ಮರುನಾಮಕರಣ ಸಮಾರಂಭಕ್ಕೆ 50 ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ನವೆಂಬರ್‌ 3ರಂದು ಗದುಗಿನಲ್ಲಿ ಕರ್ನಾಟಕ ಸಂಭ್ರಮ–50 ಕಾರ್ಯಕ್ರಮ ಆಯೋಜಿಸಿದ್ದು, ಅಂದು ಗದುಗಿನ ವೀರನಾರಾಯಣ ದೇವಾಲಯದಿಂದ ಕಾಟನ್‌ ಸೇಲ್ಸ್‌ ಸೊಸೈಟಿವರೆಗೆ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಅನೇಕ ಕಲಾಮೇಳಗಳು ಭಾಗವಹಿಸಲಿವೆ. ಇದೇ ಸಂದರ್ಭದಲ್ಲಿ ಮೈಸೂರು ದಸರಾ ಮವಣಿಗೆಯಲ್ಲಿ ಬಹುಮಾನ ಪಡೆದ ಸ್ತಬ್ದಚಿತ್ರಗಳಾದ ಸಬರಮತಿ ಆಶ್ರಮದ ಮಾದರಿ ಮತ್ತು ಲಕ್ಕುಂಡಿ ಬ್ರಹ್ಮಜಿನಾಲಯದ ಮಾದರಿಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಗದುಗಿನ ಹೆಮ್ಮೆ ಸಬರಮತಿ ಆಶ್ರಮ
ಗದುಗಿನ ಹೆಮ್ಮೆ ಸಬರಮತಿ ಆಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT