ಲಕ್ಷ್ಮೇಶ್ವರ: ‘ಲಿಂಬಯ್ಯಸ್ವಾಮಿ ಮಠದಲ್ಲಿ ನವರಾತ್ರಿ ಅಂಗವಾಗಿ ನಂದಾ ದೀಪಾರಾಧನೆ ಕಾರ್ಯಕ್ರಮ ಅ. 1ರಂದು ಸಂಜೆ 7 ಗಂಟೆಗೆ ಮಠದ ಆವರಣದಲ್ಲಿ ನಡೆಯಲಿದೆ’ ಎಂದು ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಹೇಳಿದರು.

ಇಲ್ಲಿಯ ಶ್ರೀಮಠದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ ಎರಡು ದಶಕಗಳಿಂದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದಿಂದ ಈವರೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ಪ್ರತಿವರ್ಷ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಗುತ್ತದೆ. ಈ ವರ್ಷ ಆಧ್ಯಾತ್ಮಿಕ ಚಿಂತಕ ಈರಣ್ಣ ಯರ್ಲಗಟ್ಟಿ, ಕೇಂದ್ರ ಸರ್ಕಾರದ ಶ್ರೇಷ್ಠ ತನಿಖಾಧಿಕಾರಿ ಪ್ರಶಸ್ತಿ ಪುರಸ್ಕೃತ ಕಲಬುರ್ಗಿ ಜಿಲ್ಲೆಯ ಡಿವೈಎಸ್ಪಿ ಶಂಕರಗೌಡ ಪಾಟೀಲ, ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯ ಸಂಸ್ಥಾಪಕಿ ನೀಲಮ್ಮ ದಾಸಪ್ಪನವರ ಅವರನ್ನು ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.

ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸಿಕೊಳ್ಳುವರು. ತಾಲ್ಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಆಗಮಿಸುವರು ಎಂದು ತಿಳಿಸಿದರು.

ಪ್ರತಿಷ್ಠಾನದ ಧರ್ಮದರ್ಶಿ ಚಿದಾನಂದ ಲಿಂಬಯ್ಯಸ್ವಾಮಿಮಠ, ಶಾಂತರಾಜ ಓದುನವರ, ಕೆ.ಎಸ್. ಕುಲಕರ್ಣಿ, ನಿರಂಜನ ಲಿಂಬಯ್ಯಸ್ವಾಮಿಮಠ, ಬಸಣ್ಣ ಬೆಂಡಿಗೇರಿ, ಬಸಣ್ಣ ಗಾಂಜಿ, ಮಹೇಶ ಲಿಂಬಯ್ಯಸ್ವಾಮಿಮಠ, ಗಂಗಪ್ಪ ದುರಗಣ್ಣವರ, ನಿಂಗಪ್ಪ ಬನ್ನಿ, ವಿ.ಜಿ. ಪಡಗೇರಿ, ನೀಲಪ್ಪ ಪೂಜಾರ, ರಾಮಣ್ಣ ಪಡಗೇರಿ, ನಿಂಗಪ್ಪ ಕೋರದಾಳ, ಎಂ.ಕೆ. ಕಳ್ಳಿಮಠ, ಶರಣಪ್ಪ ಗುಳಗಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.