ನರಗುಂದ: ‘ನಾಡಿನ ಜನತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಅಗತ್ಯ ಸಹಕಾರ ನೀಡುತ್ತಿದೆ. ಇದರಿಂದ ಪುರುಷರಷ್ಟೇ ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿವಾರ ನಡೆದ ಪ್ರಗತಿಬಂಧು ಸ್ವಸಹಾಯ ಸಂಘಗಳ 70 ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮಾಭಿವೃದ್ಧಿ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಶಕ್ತಿಯಾಗಿದೆ. ಮಧ್ಯವರ್ಜನೆ ಶಿಬಿರ, ನಿರ್ಗತಿಕರು ಹಾಗೂ ಅಂಗವಿಕಲರಿಗೆ ಮಾಸಾಶನ, ವಿದ್ಯಾರ್ಥಿ ವೇತನ, ಸ್ವ-ಉದ್ಯೋಗ, ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಯೋಜನಾಬದ್ಧವಾಗಿ ನಡೆಯುತ್ತಿವೆ’ ಎಂದರು.

ವಿವೇಕ ಯಾವಗಲ್ಲ ಮಾತನಾಡಿ, ‘ಕುಟುಂಬಗಳ ನಿರ್ವಹಣೆಗೆ ಆರ್ಥಿಕ ಶಕ್ತಿ ಬೇಕು. ನಾಡಿನ ಬಡ ಕುಟುಂಬಗಳಿಗೆ ಸಂಘದ ಯೋಜನೆಗಳು ಆಧಾರವಾಗಿವೆ. ಅನೇಕ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿವೆ’ ಎಂದು ಹೇಳಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೀಶ ಎ. ಮಾತನಾಡಿ, ‘ಮಹಿಳಾ ಸ್ವಸಹಾಯ ಸಂಘಗಳಿಂದ ಪಡೆಯುವ ಹಣ ಸಾಲವಲ್ಲದೆ, ಪ್ರಗತಿನಿಧಿಯಾಗಿದೆ. ಜಾತಿ ಭೇದ ಇಲ್ಲದೆ ಸಾಮಾಜಿಕ ಕಾರ್ಯಗಳು ಸಂಘದಿಂದದ ನಡೆಯುತ್ತಿವೆ. ರಾಜ್ಯದ ಶಾಲೆಗಳಿಗೆ 1,030 ಅತಿಥಿ ಶಿಕ್ಷಕರನ್ನು ಗೌರವಧನದೊಂದಿಗೆ ನೀಡಲಾಗಿದೆ. 14 ಸಾವಿರ ಜನರಿಗೆ ಮಾಸಾಶನ ನೀಡಲಾಗುತ್ತಿದೆ. ಸಮಾಜವನ್ನು ಸಶಕ್ತಗೊಳಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ’ ಎಂದರು.

ಎಸ್.ಬಿ.ಐ ವ್ಯವಸ್ಥಾಪಕ ರಾಕೇಶಕುಮಾರ, ಎಚ್.ಬಿ. ಅಸೂಟಿ, ಎಸ್.ಎಸ್. ಪೂಜಾರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.