ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಿ ಕದಡಿದರೆ ಕಾನೂನು ಕ್ರಮ ನಿಶ್ಚಿತ: ಎಸ್ಪಿ ನೇಮಗೌಡ

Published : 2 ಸೆಪ್ಟೆಂಬರ್ 2024, 15:42 IST
Last Updated : 2 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ನರಗುಂದ: ‘ಗಣೇಶೋತ್ಸವ ಹಾಗೂ ಈದಮಿಲಾದ್ ಸಂದರ್ಭದಲ್ಲಿ ಶಾಂತಿ ಕದಡುವ ಘಟನೆಗಳು ನಡೆದರೆ, ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಹೇಳಿದರು.

ಪಟ್ಟಣದ ಆರೂಢ ಭವನದಲ್ಲಿ ಈಚೆಗೆ ಪೊಲೀಸ್ ಇಲಾಖೆ ಆಶ್ರಯದಲ್ಲಿ ನಡೆದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮಾತನಾಡಿದರು.

‘ಹಬ್ಬಗಳ ಶಾಂತಿಯುತ ಆಚರಣೆಗೆ ಪ್ರತ್ಯೇಕ ಮಹಾಮಂಡಳ ರಚನೆ ಮಾಡಿಕೊಳ್ಳಬೇಕು. ಎಲ್ಲ ವರ್ಗದವರನ್ನು ಇದರಲ್ಲಿ ಸೇರಿಸಿ ಮುಂಚೂಣಿ ಕಾರ್ಯಕರ್ತರು ಅಥವಾ ಮುಖಂಡರು ವಿಶೇಷ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ಗಣೇಶ ಮೂರ್ತಿಗಳನ್ನು ಸ್ಥಳೀಯ ಪುರಸಭೆ ಅಥವಾ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಗೊತ್ತುಪಡಿಸಿರುವ ಜಲಮೂಲಗಳಲ್ಲಿಯೇ ವಿಸರ್ಜಿಸಬೇಕು’ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ. ಸುಂಕದ ಮಾತನಾಡಿ, ‘ಕೆಲವೆಡೆ ಗಲಾಟೆ ಪ್ರಕರಣಗಳು ಕಂಡು ಬಂದಲ್ಲಿ ಆ ಭಾಗದ ಹೊಣೆಗಾರಿಕೆ ವಹಿಸಿಕೊಂಡ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾತನಾಡಿ, ಗಣೇಶ ಮತ್ತು ಈದ್ ಮಿಲಾದ ಹಬ್ಬದ ಕುರಿತಂತೆ ಅಧಿಕಾರಿಗಳ ಪ್ರತ್ಯೇಕ ಕಮಿಟಿ ರಚಿಸಲಾಗುತ್ತದೆ. ಈ ಎರಡು ಹಬ್ಬಗಳ ಆಚರಣೆಗೆ ಆಯಾ ವಿಭಾಗದವರು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ವಿದ್ಯುತ್ ಮತ್ತು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯ ಸ್ಥಳ, ಇನ್ನಿತರ ಮಾಹಿತಿ ಕುರಿತು ಸ್ಪಷ್ಟವಾಗಿ ನಮೂದಿಸಿ ನಿಗದಿತ ಮೊತ್ತ ಸಲ್ಲಿಸಿ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು ಎಂದರು.

ತಹಶೀಲ್ದಾ‌ರ್ ಶ್ರೀಶೈಲ ತಳವಾರ, ಸಿಪಿಐ ಮಂಜುನಾಥ ನಡುವಿನಮನಿ, ವಸಂತ ಜೋಗಣ್ಣವರ, ಶಿವಾನಂದ ಮುತವಾಡ, ಅಂಜುಮನ್-ಎ- ಇಸ್ಲಾಂ ಸಂಸ್ಥೆಯ ಮಹೀಮ್ ಚಂದನವರ, ಬಾಷಾಸಾಹೇಬ ಪಠಾಣ ಮಾತನಾಡಿದರು.

ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಸವಿತಾ ಮುನ್ಯಾಳ, ಹೆಸ್ಕಾಂ ಅಧಿಕಾರಿ ಎಚ್.ಎಂ. ಖುದಾವಂದ,ಅಗ್ನಿ ಶಾಮಕ ದಳದ ಅಧಿಕಾರಿ ಸಂದೀಪ್ ಬಸರಗಿ,ಎಎಸ್‌ಐ ಡಿ.ಕೆ. ಹಾಲವರ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT