್ತೆ

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಮಕರ ಸಂಕ್ರಾಂತಿ ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕಿನ ಕೊಣ್ಣೂರ, ಶಿರೋಳ ಗ್ರಾಮ ಸಮೀಪದ ಮಲಪ್ರಭಾ ನದಿಯಲ್ಲಿ ವಿವಿಧ ಗ್ರಾಮದ ಜನರು ಪುಣ್ಯಸ್ನಾನ ಮಾಡಿದರು. ಎಳ್ಳು ಬೆಲ್ಲ, ಕುಸುರೆಳ್ಳು ಹಂಚಿ ಪರಸ್ಪರ ಶುಭಾಶಯ ಕೋರಿದರು.

ಮಲಪ್ರಭಾ ನದಿ ದಂಡೆಯಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಷಮುಕ್ತ ಸ್ನಾನ ಅಭಿಯಾನ: ವರದಶ್ರೀ ಪೌಂಡೇಷನ್, ಭಾರತೀಯ ಕಿಸಾನ್ ಸಂಘ, ತಾಲ್ಲೂಕು ಘಟಕ ವತಿಯಿಂದ ವಿಷಮುಕ್ತ ಸ್ನಾನ ಅಭಿಯಾನ ನಡೆಸಲಾಯಿತು ಪುಣ್ಯಸ್ನಾನಕ್ಕೆ ಆಗಮಿಸಿದ ಭಕ್ತರಿಗೆ ಕಡಲೆ ಹಿಟ್ಟು ವಿತರಿಸಲಾಯಿತು.

ಈ ವೇಳೆ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಎಸ್.ಬಿ. ದಲ್ಲಿ, ಯಲ್ಲಪ್ಪಗೌಡ್ರ, ಈರಣ್ಣ ಹುರಕಡ್ಲಿ, ಶಿವಪ್ಪ ವಾಲಿ, ಪ್ರವೀಣ ಯಲಿಗಾರ, ಚೌಡಪ್ಪ ಶಿರಹಟ್ಟಿ, ಬಸಯ್ಯ ಹಿರೇಮಠ, ಬಿ.ಎಂ. ಕೊರಗಣ್ಣವರ, ಆರ್.ವೈ. ಮುಳಗುಂದ, ಶರಣಪ್ಪ ಗಟ್ಟಿ, ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ನಾಗೇಶ ಅಪ್ಪೋಜಿ, ವಿಠ್ಠಲ ಮುಧೋಳೆ, ಮುತ್ತು ಯಲಿಗಾರ, ಎನ್.ಕೆ. ಸೋಮಾಪುರ, ಎಸ್.ಆರ್. ಸಾಲಿಗೌಡ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.