ನರಗುಂದ: ತಾಲ್ಲೂಕಿನ ಬನಹಟ್ಟಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಕೆಲವು ಓಣಿಗಳಿಗೆ 10-15 ದಿನಗಳಿಂದ ನೀರು ಪೂರೈಕೆಗೊಂಡಿದ್ದಿಲ್ಲ. ಇದರ ಕುರಿತು ಸೋಮವಾರ ಸಮಗ್ರ ವರದಿ ಪ್ರಕಟಿಸಿದ ಪರಿಣಾಮ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ ಪ್ರಯತ್ನ ಪಟ್ಟು 24x7 ಡಿಬಿಓಟಿ ನೀರು ಪೂರೈಕೆಯಾಗುವಂತೆ ವ್ಯವಸ್ಥೆ ಮಾಡಿದರು.

ಗ್ರಾಮಸ್ಥರು ನರಗುಂದ ಪಟ್ಟಣದಿಂದ ನೀರು ತೆಗೆದುಕೊಂಡು ಹೋಗುವ ಪರಿಸ್ಥಿತಿ ಭಾನುವಾರ ಇಲ್ಲವಾಯಿತು. ಇದರಿಂದ ಗ್ರಾಮಸ್ಥರು ಹರ್ಷಗೊಂಡರು.

ಬನಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಎನ್.ಎಂ. ಪೂಜಾರ ಮಾತನಾಡಿ, ‘ನರಗುಂದದ ಸುತ್ತಮುತ್ತ ಅಕಾಲಿಕ ಮಳೆ, ಗಾಳಿಯಿಂದ ವಿದ್ಯುತ್ ಸಮಸ್ಯೆಯಾಗಿ ಆಚಮಟ್ಟಿ ಕ್ರಾಸ್ನಲ್ಲಿರುವ ಡಿಬಿಓಟಿಯಿಂದ ನೀರು ಪೊರೈಕೆ ವಿಳಂಬವಾಗಿದೆ. ನವಲಗುಂದದಿಂದ ಬರುವ ವಿದ್ಯುತ್ ತಂತಿ ಹರಿದು ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಜೊತೆಗೆ ಕಲಕೇರಿ ಹುಣಸಿಕಟ್ಟಿ ನಡುವೆ ಹಿರೇಹಳ್ಳದ ಸೇತುವೆ ಬಳಿ ನೀರಿನ ಪೈಪ್ ಲೈನ್ ಒಡೆದ ಕಾರಣ ಸೋಮವಾರ ರಿಪೇರಿ ಮಾಡಲಾಗಿದೆ. ಈಗ ಮೊದಲಿನಂತೆ ನೀರು ಪೂರೈಕೆ ಮಾಡಲಾಗುತ್ತಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.