ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರಿಕೆಗೆ ಬಲ ತುಂಬಿ: ಆಗ್ರಹ

ನೇಕಾರಿಕೆ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದ ಕೋವಿಡ್‌–19: ಅನಿಲ ಗಡ್ಡಿ
Last Updated 17 ಫೆಬ್ರವರಿ 2022, 7:49 IST
ಅಕ್ಷರ ಗಾತ್ರ

ಗದಗ: ನೇಕಾರರು ಉದ್ಯೋಗ್ಯಕ್ಕಾಗಿ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಮತ್ತು ನೇಕಾರಿಕೆಯನ್ನು ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೆಟಗೇರಿ ಜವಳಿ ಉತ್ಪಾದಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ ಗಡ್ಡಿ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗದಗ ಜಿಲ್ಲೆಯ ಬೆಟಗೇರಿಯಲ್ಲಿ ತಲೆತಲಾಂತರಗಳಿಂದ ನೇಕಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದವರ ಬದುಕು ಇಂದು ಕಷ್ಟದಲ್ಲಿದೆ. ಕೊರೊನಾ ಸೋಂಕು ನೇಕಾರರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಸಿದೆ. ಉದ್ಯಮ ನಡೆಸುವುದೇ ಕಷ್ಟಕರವಾಗಿದೆ ಎಂದು ಅವರ ಅಲವತ್ತುಕೊಂಡರು.

ಎರಡು ವರ್ಷಗಳಿಂದ ಇಡೀ ದೇಶವನ್ನು ಕೊರೊನಾ ಸೋಂಕು ಬಾಧಿಸುತ್ತಿದೆ. ಪ್ರತಿವರ್ಷ ಮದುವೆ ಋತುವಿನಲ್ಲೇ ಸೋಂಕು ಉಲ್ಬಣಗೊಳ್ಳು ತ್ತಿರುವುದರಿಂದ ಸಾಕಷ್ಟು ಮದುವೆಗಳು ಸರಳವಾಗಿ ನಡೆಯುತ್ತಿವೆ. ಇದರ ಪೆಟ್ಟು ನೇರವಾಗಿ ನೇಕಾರರ ಮೇಲೆ ಬಿದ್ದಿದೆ. ಮದುವೆ, ಮುಂಜಿಗೆ ಸಿದ್ಧಗೊಳಿಸಿದ ಸೀರೆಗಳು ಮಾರಾಟವಾಗುತ್ತಿಲ್ಲ. ಇದರಿಂದಾಗಿ ನೇಕಾರರ ಬದುಕು ಕಷ್ಟಕ್ಕೆ ಬಿದ್ದಿದೆ. ಕೆಲವು ನೇಕಾರರು ಇದರ ಸಹವಾಸವೇ ಬೇಡ ಎಂದು ಹೇಳಿ ಉದ್ಯಮವನ್ನೇ ಬಂದ್‌ ಮಾಡುತ್ತಿದ್ದಾರೆ’ ಎಂದು ಹೇಳಿದರು.

ನೇಕಾರಿಕೆಗೆ ಅಗತ್ಯವಿರುವ ಕಚ್ಚಾ ಮಾಲುಗಳಾದ ರೇಷ್ಮೆ ಮತ್ತು ನೂಲಿನ ದರ ಏರಿಕೆಯಾಗಿದ್ದು, ಉದ್ಯೋಗ ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ನೇಕಾರರಿಗೆ ರಿಯಾಯಿತಿ ದರದಲ್ಲಿ ನೂಲು ಮತ್ತು ರೇಷ್ಮೆ ಸರಬರಾಜು ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದ ಅವರು, ಈ ಸಂಬಂಧ ಜವಳಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅವರಿಗೆ ಮನವಿಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನೇಕಾರರ ವಿದ್ಯುತ್ ಬಿಲ್‌ನಲ್ಲಿ ಕೆಇಬಿ ಯವರು ಹಾಕುವ ನಿಗದಿ ಶುಲ್ಕವನ್ನು ರದ್ದು ಮಾಡಬೇಕು. ನೇಕಾರರು ನಡೆಸುವ ಉದ್ಯಮಗಳ ಕಟ್ಟಡಗಳಿಗೆ ನಗರಸಭೆಯವರು ವಾಣಿಜ್ಯ ತೆರಿಗೆ ವಿಧಿಸುತ್ತಿದ್ದು, ನೇಕಾರಿಕೆಯನ್ನು ಗೃಹ ಕೈಗಾರಿಕೆ ಎಂದು ಪರಿಗಣಿಸಿ ಅದಕ್ಕೆ ತಕ್ಕುದಾದ ತೆರಿಗೆ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಅಮರೇಶ ಜಾಗಿ, ಅಶೋಕ ತಟ್ಟಿ, ಮಲ್ಲಿಕಾರ್ಜುನ ಬೆಲ್ಲದ, ವಿಷ್ಣು ಪಾಸ್ತೆ, ಮಾರುತಿ ಸೊ. ಜುಟ್ಲಾ, ವಿರುಪಾಕ್ಷಪ್ಪ ಚನ್ನಪ್ಪನವರ ಇದ್ದರು.

ನೇಕಾರರು ತಯಾರಿಸಿರುವ ಸೀರೆ ಹಾಗೂ ಬಟ್ಟೆಯ ಮೇಲೆ ಈಗಿರುವ ಶೇ 5ರಷ್ಟು ಜಿ.ಎಸ್.ಟಿ. ಬದಲಾಗಿ ಶೇ 2ರಷ್ಟು ಜಿ.ಎಸ್.ಟಿ. ನಿಗದಿಪಡಿಸಬೇಕು.

ಅನಿಲ ಗಡ್ಡಿ, ಜವಳಿ ಉತ್ಪಾದಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT