ಗದಗ: ‘ಎರಡು ಶತಮಾನಗಳ ಶ್ರೀಮಂತ ಇತಿಹಾಸವಿರುವ ಬಸವೇಶ್ವರ ನಗರದ ವೀರಭದ್ರೇಶ್ವರ ದೇವರು ಹಾಗೂ ಭದ್ರಕಾಳಿ ದೇವಿಯ 73ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಆಗಸ್ಟ್ 7ರಿಂದ 19ರವರೆಗೆ ನಡೆಯಲಿವೆ’ ಎಂದು ನಗರಸಭೆ ಸದಸ್ಯ ಚಂದ್ರಶೇಖರ ತಡಸದ ಹೇಳಿದರು.

‘ಆಗಸ್ಟ್ 7ರಂದು ಮಧ್ಯಾಹ್ನ 12ಕ್ಕೆ ವೀರಭದ್ರೇಶ್ವರ ದೇವರು ಹಾಗೂ ಭದ್ರಕಾಳಿ ದೇವಿಯ ಕಲ್ಯಾಣ ಮಹೋತ್ಸವ, ಸಂಜೆ 5.30ಕ್ಕೆ ಕಳಸಾರೋಹಣ ಹಾಗೂ 101 ಮುತ್ತೈದೆಯರಿಂದ ಕುಂಭಮೇಳ ನಡೆಯಲಿದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆಗಸ್ಟ್ 11ರಂದು ಸಂಜೆ 6.30ಕ್ಕೆ ಮಹಾರಥೋತ್ಸವ, ಆಗಸ್ಟ್ 12ರಂದು ಬೆಳಿಗ್ಗೆ 10ಕ್ಕೆ ಅಗ್ನಿಪ್ರವೇಶ, ಸಂಜೆ 6.30ಕ್ಕೆ ಲಘು ರಥೋತ್ಸವ ಹಾಗೂ ಆಗಸ್ಟ್ 19ರಂದು ಸಂಜೆ 7ಕ್ಕೆ ದೀಪಾಲಂಕಾರ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

ವರದೇಶ್ವರಿ ಮಹಿಳಾ ಮಂಡಳದ ಸಂಸ್ಥಾಪಕ ಅಧ್ಯಕ್ಷೆ ಸುರೇಖಾ ಸದಾನಂದ ಪಿಳ್ಳಿ ಮಾತನಾಡಿ, ‘ವೀರಭದ್ರೇಶ್ವರ ದೇವರ ಜಾತ್ರಾಮಹೋತ್ಸವ ಅಂಗವಾಗಿ ನಗರಸಭೆ ವಿರೋಧ ಪಕ್ಷದ ನಾಯಕರಾಗಿದ್ದ ದಿ. ಸದಾನಂದ ಪಿಳ್ಳಿ ಅವರ ಸ್ಮರಣಾರ್ಥ ಆಗಸ್ಟ್ 9ರಂದು ಬೆಳಿಗ್ಗೆ 10.30ರಿಂದ ದೇವಸ್ಥಾನ ಹಿಂಭಾಗದಲ್ಲಿರುವ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಅರಿವು ಫೌಂಡೇಷನ್, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ವೀರಭದ್ರ ದೇವಸ್ಥಾನ ಟ್ರಸ್ಟ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಮಹಿಳಾ ವೈದ್ಯರು, ಚಿಕ್ಕಮಕ್ಕಳ ತಜ್ಞರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಉದ್ಘಾಟಿಸುವರು. ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಡಿ.ಆರ್.ಪಾಟೀಲ, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಚಿಕ್ಕಮಕ್ಕಳ ತಜ್ಞ ಡಾ. ಈರಣ್ಣ ಹಳೇಮನಿ ಸೇರಿ ಹಲವು ವೈದ್ಯರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ವೀರಭದ್ರೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶಿವಪುತ್ರಪ್ಪ ಬೇವಿನಮರದ, ಶಿವಬಸಪ್ಪ ಯಂಡಿಗೇರಿ ಹಾಗೂ ಅರಿವು ಫೌಂಡೇಶನ್ ಅಧ್ಯಕ್ಷ ವಿಶ್ವನಾಥ ಶೀರಿ, 73ನೇ ಜಾತ್ರಾ ಮಹೋತ್ಸವದ ಅಧ್ಯಕ್ಷ ರಾಚಣ್ಣ ದೋಟ್ಯಾಳ, ಉಪಾಧ್ಯಕ್ಷ ವಿಶ್ವನಾಥ ಕೆರಕಣ್ಣವರ, ಕಾರ್ಯದರ್ಶಿ ರಾಚೋಟೇಶ್ವರ ಕಾಡಪ್ಪನವರ, ದಾನೇಶ ತಡಸದ, ಶಂಕರ ಕಾರದಕಟ್ಟಿ, ವಿಶ್ವನಾಥ ಶಿರಗಣ್ಣವರ, ಆದರ್ಶ ಅಸೂಟಿ, ವಿಶ್ವನಾಥ ಇಟಗಿ, ಗಗನ ಗೋಕಾವಿ, ಅಭಿಷೇಕ ಸಂಬರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.