ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ದಿಗ್ಗಜಗೆ ಸ್ವರ ಶ್ರದ್ಧಾಂಜಲಿ

Last Updated 25 ಸೆಪ್ಟೆಂಬರ್ 2020, 16:20 IST
ಅಕ್ಷರ ಗಾತ್ರ

ಗದಗ: ‘ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ, ಕೋಟ್ಯಂತರ ಜನರ ಪ್ರೀತಿ ಸಂಪಾದಿಸಿದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಸಂಗೀತ ಕ್ಷೇತ್ರದ ದಿಗ್ಗಜ’ ಎಂದು ಪ್ರೊ.ಗಂಗಾಧರ ಹಿಡಿಕಿಮಠ ಹೇಳಿದರು.

ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಗಾನಯೋಗಿ ಪಂಚಾಕ್ಷರ ಗವಾಯಿ’‌ ಚಿತ್ರದಲ್ಲಿ ‘ಗಾನವಿದ್ಯಾ ಬಲು ಕಠಿಣ ಹೈ’ ಎಂಬ ಹಾಡನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿ ಸಂಗೀತ ಮಾಂತ್ರಿಕ ಎನಿಸಿಕೊಂಡಿದ್ದರು ಎಂದು ಹೇಳಿದರು.

ಡಾ. ಮೃತ್ಯುಂಜಯ ಶೆಟ್ಟರ್ ಮಾತನಾಡಿ, ‘ಮಧುರ ಕಂಠದ ಗಾಯಕ ಎಸ್‌ಪಿಬಿ ಅವರು ಯಾವುದೇ ಭಾಷೆಯಲ್ಲಿ ಹಾಡಿದರೂ ಭಾವ ತುಂಬಿ ಹಾಡುತ್ತಿದ್ದರು. ಆ ಮೂಲಕ ಹಾಡಿಗೆ ಅದ್ಭುತ ಶಕ್ತಿ ತುಂಬುತ್ತಿದ್ದರು. ಅವರ ನಿಧನದಿಂದ ಸಂಗೀತಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಹೇಳಿದರು.

ಡಾ. ಸುಮಿತ್ರಾ ಹಿರೇಮಠ್, ಜಿ.ಜಿ.ಸುತಾರ್, ಎಸ್.ಗಡ್ಡದಮಠ, ಎಂ.ಎಸ್.ಮಠದ, ವೈ.ಆರ್.ಮೂಲಿಮನಿ, ಹನುಮಂತ ಕೊಡಗಾನೂರ, ಶರಣಪ್ಪ ಕಲಬುರ್ಗಿ, ಪಟ್ಟದಕಲ್ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT