ರೋಣ: ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ವತಿಯಿಂದ ಶುಕ್ರವಾರ ನಿಮಿಷಾಂಬ ದೇವಿ ಉತ್ಸವ ಆಚರಿಸಲಾಯಿತು.

ಉತ್ಸವದಲ್ಲಿ ಈಚೆಗೆ ಗೌರವ ಡಾಕ್ಟರೇಟ್ ಪಡೆದ ಪಟ್ಟಣದ ನಿವಾಸಿ ಸಮಾಜ ಸೇವಕಿ ಲೀಲಾ ಚಿತ್ರಗಾರ ಅವರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಸಮಾಜದ ಯುವ ಮುಖಂಡ ಸಂತೋಷ ಚಿತ್ರಗಾರ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಸಮಾಜದ ಏಳಿಗೆಗೆ ಹಾಗೂ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯ ನಿರ್ವಹಿಸಬೇಕು. ಸಮಾಜದ ಲೀಲಾ ಚಿತ್ರಗಾರ ಅವರಿಗೆ ಗೌರವ ಡಾಕ್ಟರೇಟ್ ದೊರಕಿರುವುದು ಸಮಾಜಕ್ಕೆ ಅತಿ ಸಂತಸವಾಗಿದೆ ಎಂದರು.

ಲೀಲಾ ಅವರ ಹಾಗೆ ನಿಸ್ವಾರ್ಥ ಸಾಮಾಜಿಕ ಸೇವೆಯಲ್ಲಿ ಪ್ರತಿಯೊಬ್ಬರು ತೂಡಗುವಂತಾಗಬೇಕು, ಸಾಮಾನ್ಯ ಮನೆತನ ಒಂದರಲ್ಲಿ ಜನಿಸಿ ಇಂದಿನ ದಿನ ಎಲ್ಲರೂ ಗುರುತಿಸುವಂತೆ ಅವರು ಬೆಳೆದಿದ್ದು ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಸೇರಿದಂತೆ ತಾಲ್ಲೂಕಿನ ಎಲ್ಲರಿಗೂ ವಿಶೇಷವಾಗಿ ಮಹಿಳೆಯರಿಗೆ ಅವರ ಸಾಧನೆ ಮಾದರಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಲೀಲಾ ಚಿತ್ರಗಾರ, ಸಮಾಜದ ಒಳಿತಿಗಾಗಿ ಶ್ರಮಿಸಿದವರನ್ನು ಯಾವತ್ತೂ ಜನ ಮರೆಯುವುದಿಲ್ಲ. ಮುಂದಿನ ದಿನಮಾನಗಳಲ್ಲಿ ಪಟ್ಟಣದಲ್ಲಿ ಸಾವಿರಾರು ಗಿಡ ನೆಟ್ಟು ಪೋಷಿಸುವ ಮೂಲಕ ಸಮಾಜ ಸೇವೆ ಮುಂದುವರೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಕುಮಾರ ಚಿತ್ರಗಾರ, ಚಂದ್ರು ಚಿತ್ರಗಾರ, ರಾಮಣ್ಣ ಚಿತ್ರಗಾರ, ವಿಜಯ ಚಿತ್ರಗಾರ, ರವಿ ಚಿತ್ರಗಾರ, ಶಕುಂತಲಾ ಚಿತ್ರಗಾರ, ಅಂಬಕ್ಕ ಚಿತ್ರಗಾರ, ನಾರಾಯಣ ಚಿತ್ರಗಾರ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.