ಮಂಗಳವಾರ, ಮೇ 24, 2022
27 °C

ರಾಯಲ್‌ ಎನ್‌ಫೀಲ್ಡ್‌ ಶೋರೂಂಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಇಲ್ಲಿನ ಮುಳಗುಂದ ನಾಕ ಬಳಿ ಇರುವ ರಾಯಲ್‌ ಎನ್‌ಫೀಲ್ಡ್‌ ಶೋರೂಂಗೆ ಬೆಂಕಿ ಬಿದ್ದ ಪರಿಣಾಮ 30ಕ್ಕೂ ಹೆಚ್ಚು ಹೊಸ ಬುಲೆಟ್‌ ಬೈಕ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ.

ಶುಕ್ರವಾರ ಅಮಾವಾಸ್ಯೆ ಪೂಜೆನೆರವೇರಿಸಿ, ಶೋ ರೂಂ ಬಂದ್‌ ಮಾಡಿ ಸಿಬ್ಬಂದಿ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶೋ ರೂಂ ಒಳಗೆ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್‌ ಸರ್ಕಿಟ್‌ ಕಾರಣ ಎನ್ನಲಾಗಿದೆ.

ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಶೋ ರೂಂನೊಳಗೆ ಕಾಣಿಸಿಕೊಂಡ ಬೆಂಕಿ 30ಕ್ಕೂ ಅಧಿಕ ಹೊಸ ಬುಲೆಟ್‌ ಬೈಕ್‌ಗಳನ್ನು ಆಹುತಿ ಪಡೆದಿದೆ.ಯುಗಾದಿ ದಿನ ಬೈಕ್‌ ತೆಗೆದುಕೊಳ್ಳಬೇಕು ಎಂದು ಅನೇಕರು ತುಂಬ ದಿನಗಳ ಹಿಂದೆಯೇ ಬುಕಿಂಗ್‌ ಮಾಡಿದ್ದರು. ಹಾಗಾಗಿ, ಗ್ರಾಹಕರಿಗೆ ಬೈಕ್‌ ಡೆಲಿವರಿ ಮಾಡಬೇಕಿದ್ದ ಕಾರಣ ಶುಕ್ರವಾರ ಶೋರೂಂನಲ್ಲಿ ಹೆಚ್ಚು ಹೊಸ ಬೈಕ್‌ಗಳಿದ್ದವು ಎನ್ನಲಾಗಿದೆ. ಅಲ್ಲದೇ, ಸರ್ವಿಸ್‌ಗೆ ಬಿಟ್ಟಿದ್ದ ಗಾಡಿಗಳು ಕೂಡ ಶೋರೂಂನಲ್ಲಿದ್ದವು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು