ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಗುಂದ: ಸಿದ್ಧೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶ

ಯುಗಾದಿ: ಮುಳಗುಂದದಲ್ಲಿ ಇಂದು ರಥೋತ್ಸವ
ಚಂದ್ರಶೇಖರ್ ಭಜಂತ್ರಿ
Published 9 ಏಪ್ರಿಲ್ 2024, 6:35 IST
Last Updated 9 ಏಪ್ರಿಲ್ 2024, 6:35 IST
ಅಕ್ಷರ ಗಾತ್ರ

ಮುಳಗುಂದ: ಇಲ್ಲಿನ ಸಿದ್ಧೇಶ್ವರ ದೇವಾಲಯವು ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಯುಗಾದಿ ದಿನ ಸೂರ್ಯಾಸ್ತದ ಸಮಯದಲ್ಲಿ ದೇವಾಲಯದ ಮೂರು ಮಂಟಪಗಳನ್ನು ಪ್ರವೇಶಿಸಿ ಗರ್ಭಗುಡಿಯಲ್ಲಿರುವ ಸಿದ್ಧೇಶ್ವರ ಲಿಂಗದ ಮೇಲೆ ನೇರವಾಗಿ ಸೂರ್ಯರಶ್ಮಿ ಸ್ಪರ್ಶಿಸುವುದು ಇಲ್ಲಿನ ವಿಶೇಷ.

ಬೆಳ್ವೊಲ 300 ಪ್ರದೇಶದ ವ್ಯಾಪ್ತಿಯ ಆಡಳಿತ ವಿಭಾಗದ ರಾಜಧಾನಿಯಾಗಿದ್ದ ಮುಳಗುಂದ, ಐತಿಹಾಸಿಕ ಪ್ರಸಿದ್ಧ ಶಿಲ್ಪ ಕಲೆಯ ಕೆತ್ತನೆಯಲ್ಲಿ ನಿರ್ಮಾಣವಾದ ದೇವಾಲಯಗಳನ್ನು ಒಳಗೊಂಡಿದ್ದು, ಊರಿನ ದಕ್ಷಿಣ ದಿಕ್ಕಿನ ಪ್ರವೇಶದ ಅಗಸಿ ಬಾಗಿಲಿನ ಹತ್ತಿರವಿರುವ ಅತ್ಯುತ್ತಮ ಕಲಾ ಕುಸುರಿಯ ಕೆತ್ತನೆಯ ಕಲೆಯನ್ನೊಳಗೊಂಡಿದೆ. ದೇವಾಲಯದ ಒಳಭಾಗದಲ್ಲಿ ಮೂರು ಗರ್ಭಗುಡಿಗಳಿವೆ. ಪ್ರತಿಯೊಂದರಲ್ಲೂ ಈಶ್ವರ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.

ಈ ಅಪರೂಪದ ದೇವಾಲಯವು ಕಪ್ಪು ಶಿಲೆಯಲ್ಲಿ ನಿರ್ಮಿತವಾಗಿದ್ದು, ಕಟ್ಟಡದ ಕೆಳ ಹಂತದಲ್ಲಿ ಸುಂದರ ಕಲಾಕೃತಿಗಳನ್ನು ಕೆತ್ತಲಾಗಿದೆ. ದ್ವಾರಗಳಲ್ಲಿ ಲತಾಸುರಳಿ, ರತ್ನಸ್ತಂಭ ಶಾಖೆಗಳಿವೆ. ಇತಿಹಾಸ ಸಾರುವ ರಾಜರ ಕಾಲದ ಶಿಲಾ ಶಾಸನಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಇಲ್ಲಿನ ಯುವ ಪಡೆ ದೇವಾಲಯದ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಕಾಯಕದಲ್ಲಿ ನಿರತವಾಗಿದೆ.

ರತೋತ್ಸವ ಇಂದು: ‘ಏ.9ರಂದು ಸಂಜೆ 5 ಗಂಟೆಗೆ ವಾದ್ಯ ವೈಭವಗಳೊಂದಿಗೆ ಸಿದ್ಧೇಶ್ವರ ರಥೋತ್ಸವ ಜರುಗಲಿದೆ. ಸಂಜೆ 7ಕ್ಕೆ ಅನುಭಾವ ಗೋಷ್ಠಿ ನಡೆಯಲಿದೆ’ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಗಂಗಪ್ಪ ಸುಂಕಾಪೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT