ಮಂಗಳವಾರ, ಮಾರ್ಚ್ 28, 2023
23 °C

ಶಿಕ್ಷಕರ ಕಾಳಜಿಯಿಂದ ಇಂದು ವೈದ್ಯನಾಗಿರುವೆ: ಡಾ. ಸೋಮಪ್ಪ ಸಿ. ರಾಥೋಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರೇಗಲ್: ‘ಸದಾ ಆಟದಲ್ಲಿ ಮುಂದಿದ್ದ ನನಗೆ ಶಾಲೆಯ ಎಲ್ಲಾ ಸಿಬ್ಬಂದಿ ಓದುವ ಹವ್ಯಾಸವನ್ನು ಜೀವನದುದ್ದಕ್ಕೂ ಬರುವಂತೆ ಮಾಡಿದರು. ಅದರ ಫಲವಾಗಿ ನಾನು ಇಂದು ಎಂ.ಬಿ.ಬಿ.ಎಸ್ ಪದವಿ ಪಡೆದು ವೈದ್ಯನಾಗಿರುವೆ’ ಎಂದು ನರೇಗಲ್ ಹೋಬಳಿಯ ಭೈರಾಪುರ ತಾಂಡಾದ ಡಾ. ಸೋಮಪ್ಪ ಸಿ. ರಾಥೋಡ್ ಹೇಳಿದರು.

ಎರಡು ವರ್ಷ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಭಾರತೀಯ ಸೇನೆಯ ಕಮಾಂಡೋ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ಅವರು ತಮ್ಮ ಬದುಕು ಬದಲಿಸಿದ ಗುರುಗಳನ್ನು ಮನದುಂಬಿ ನೆನೆಯುವುದು ಹೀಗೆ: 

‘ತಂದೆ ತಾಯಿ ಕೂಲಿ ಕೆಲಸ ಮಾಡುತ್ತಾ ಕಡು ಬಡತನದಲ್ಲಿ ಜೀವನ ನಡೆಸುತ್ತಿರುವಾಗ ಅನಿವಾರ್ಯವಾಗಿ ಕುಟುಂಬ ನಿರ್ವಹಣೆಗೋಸ್ಕರ ನಾನು ಸಹ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದೆ. ಆಗ ಕಾಲಕಾಲೇಶ್ವರ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಗುರುಗಳಾದ ಎ.ಎಸ್.ಧೋನಿ, ಬಿ.ಎನ್.ಜಾಲಿಹಾಳ, ಉಮೇಶ್ ನಾಯ್ಕ, ನಾಗಶೆಟ್ಟಿ ಕುಲಕರ್ಣಿ, ಸಿದ್ದಲಿಂಗಪ್ಪ ಅಪರಪ್ಪನವರ, ಸಿ.ಎಸ್.ನದಾಫ್ ಇವರು ಗುಡ್ಡದ ಮೇಲಿನ ಭೈರಾಪುರ ತಾಂಡಾಕ್ಕೆ 17 ಕಿ.ಮೀ. ನಡೆದುಕೊಂಡು ಬಂದು ಮರಳಿ ಶಾಲೆಗೆ ಬರುವಂತೆ ಸ್ಫೂರ್ತಿ ತುಂಬಿದರು. ನನ್ನ ಪಾಲಕರನ್ನು ಮನವೊಲಿಸಿದರು’.

‘ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಾಧನೆಗೆ ಹಾಗೂ ಮನೆಯ ಸಂಪೂರ್ಣ ಚಿತ್ರಣ ಬದಲಾವಣೆಗೆ ವ್ಯವಸ್ಥಿತವಾಗಿ ಅಡಿಪಾಯ ಹಾಕಿದ ಮೊರಾರ್ಜಿ ಶಾಲೆಯ ಎಲ್ಲಾ ಶಿಕ್ಷಕರು ನನನಗೆ ಅಚ್ಚುಮೆಚ್ಚು’ ಎಂದು ಹೇಳಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು