ನರಗುಂದ: ಶರಣಬಸವೇಶ್ವರರ ಪುರಾಣ ಎಷ್ಟು ಕೇಳಿದರೂ, ಮತ್ತೇ ಮತ್ತೇ ಕೇಳಬೇಕೆನಿಸುತ್ತದೆ. ಶರಣಬಸವೇಶ್ವರರ ಪವಾಡಗಳು ವರ್ಣನಾತೀತ ಎಂದು ಹರ್ಲಾಪುರದ ಕೊಟ್ಟೂರೇಶ್ವರ ಮಠದ ಅಭಿನವ ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.

ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಚರಮೂರ್ತೇಶ್ವರ ಮಠದ ಶಿವಾನಂದ ದೇವರ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಲಬುರ್ಗಿ ಶರಣಬಸವೇಶ್ವರರ ಪುರಾಣದ ಮಂಗಳವಾರ ರಾತ್ರಿ ರಾಶಿ ಮಾಡುವ ಹಾಗೂ ಹಂತಿಪದಗಳ ಸಂಭ್ರಮದಲ್ಲಿ ಮಾತನಾಡಿದರು.

ಶರಣಬಸವೇಶ್ವರರ ಪ್ರತಿಯೊಂದು ಪವಾಡವು ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅವರ ಆದರ್ಶಮಯ ಜೀವನ ಎಲ್ಲರೂ ಅರಿಯಬೇಕು. ಕೃಷಿಗೆ, ದಿನಕ್ಕೆ ಶರಣಬಸವೇಶ್ವರರು ನೀಡಿದ ಆದ್ಯತೆ ಎಲ್ಲಿಯೂ ಕಾಣಲಾರೆವು. ಇಂದು ಸದ್ಗತಿ ಹೊಂದಲು ಶರಣರ ಜೀವನ ಚರಿತ್ರೆ ಕೇಳಬೇಕು ಎಂದು ಸಲಹೆ ನೀಡಿದರು.

ಹಂತಿಪದಗಳ ಸಂಭ್ರಮ:

ಪುರಾಣದ ಸನ್ನಿವೇಶದಲ್ಲಿ ಧಾನ್ಯಗಳನ್ನು ರಾಶಿ ಮಾಡುವುದು ಸಂಭ್ರಮ. ಅದನ್ನು ಪುರಾಣದ ವೇದಿಕೆಯಲ್ಲಿ ಎತ್ತುಗಳನ್ನು ಕರೆತಂದು, ಮೇಟಿ ನಡೆಸಿ ರಾಶಿ ಮಾಡಿ ಭಕ್ತರಿಗೆ ಜೋಳವನ್ನು ಹಂಚಿದ್ದು ವಿಶೇಷವಾಗಿ ಜನಮನ ಸೆಳೆಯಿತು.

ಈ ಸಂದರ್ಭದಲ್ಲಿ ವಿರಕ್ತಮಠದ ಶಿವಕುಮಾರ ಶಿವಾಚಾರ್ಯರು, ಶಿವಾನಂದ ದೇವರು ಹಾಗೂ ವಿರಕ್ತಮಠದ ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.