ನರಗುಂದ: ಯೂರಿಯಾ ಗೊಬ್ಬರ ಪಡೆಯಲು ರೈತರು ಶನಿವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಪಟ್ಟಣಕ್ಕೆ ಭಾನುವಾರ 30 ಟನ್ ಗೊಬ್ಬರ ಪೂರೈಕೆಯಾಗಿದೆ. ಅದನ್ನು ಪಡೆಯಲು ರೈತರು ಬೆಳಗಿನಿಂದ ಸರತಿ ಹಚ್ಚಿ ಮುಗಿಬಿದ್ದಿದ್ದು ಕಂಡು ಬಂತು.

ಮಹಿಳೆಯರು, ವೃದ್ಧರು ಗೊಬ್ಬರ ಪಡೆಯಲು ತೀವ್ರ ಹರಸಾಹಸ ಪಟ್ಟರು. ವಿವಿಧ ಅಗ್ರೋ ಸೆಂಟರ್ಗಳಲ್ಲಿ ಹೆಚ್ಚಿನ ಸಾಲು ಕಂಡು ಬಂತು. ಕೃಷಿ ಅಧಿಕಾರಿಗಳು, ಪೊಲೀಸರು ಎಲ್ಲ ರೈತರಿಗೆ ಗೊಬ್ಬರ ತಲುಪುವಂತೆ ಕ್ರಮವಹಿಸಿದರು. ಆದರೂ ಬೇಡಿಕೆಗೆ ತಕ್ಕಂತೆ ಗೊಬ್ಬರ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

‘ಜುಲೈ ತಿಂಗಳಲ್ಲಿ ಒಟ್ಟು 850 ಟನ್ ಗೊಬ್ಬರ ಬಂದಿದೆ. ಭಾನುವಾರ 30 ಟನ್ ಬಂದಿದೆ. ಹಂತಹಂತವಾಗಿ ಪೂರೈಕೆಯಾಗುತ್ತಿದೆ. ರೈತರು ಸಮಾಧಾನದಿಂದ ಪಡೆಯಬೇಕು' ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.