ನರಗುಂದ: ಪಟ್ಟಣದ ಸವದತ್ತಿ ರಸ್ತೆಯಲ್ಲಿ ಹಗೇದಕಟ್ಟಿ ಓಣಿಯ ಮನೆಯೊಂದರಲ್ಲಿ ಮಹಿಳೆಯೊಬ್ಬರು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಪಟ್ಟಣದ ಪವಿತ್ರಾ ಹರೀಶ್ ಕಲಕುಟ್ಕರ (22) ಮೃತ ಮಹಿಳೆ.

ಮೃತ ಮಹಿಳೆ ಪವಿತ್ರಾ ಅವರ ತಂದೆ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ನರಗುಂದ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ ದಾಖಲಿಸಿದ್ದಾರೆ.

‘ಪವಿತ್ರಾಳ ಅತ್ತೆ ಸೋಮವ್ವ ಮತ್ತು ಮಾವ ಮೂಕಪ್ಪ ಅವರು ನನ್ನ ಮಗಳ ಕುತ್ತಿಗೆ ಹಿಚುಕಿ ನಂತರ ಅವಳಿಗೆ ಉರುಳು ಹಾಕಿ ಕೊಲೆ ಮಾಡಿದ್ದಾರೆ’ ಎಂದು ಮೃತಳ ತಂದೆ ನಾಗರಾಜ ದೂರಿನಲ್ಲಿ ಆರೋಪ ಮಾಡಿದ್ದಾರೆ.

‘ನನ್ನ ಮಗ ನೌಕರಿ ಅದಾನ, ನಿಮ್ಮ ಅಪ್ಪ ಅವನಿಗೆ ವರದಕ್ಷಿಣೆ ಏನೂ ಕೊಟ್ಟಿಲ್ಲ ಎಂದು ಹೀಯಾಳಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ತವರು ಮನೆಯಿಂದ ಬಂಗಾರ ಮತ್ತು ಹಣ ತರುವಂತೆ ಪೀಡಿಸುತ್ತಿದ್ದರು. ಕೊನೆಗೆ ಕೊಲೆ ಮಾಡಿ, ನೇಣು ಹಾಕಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪವಿತ್ರಾ ಅವರು ವಾರದ ಹಿಂದಷ್ಟೇ ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದರು. ಮೃತಳಿಗೆ ಆರು ತಿಂಗಳಿನ ಮಗು ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.