ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ವಾಸುದೇವಸ್ವಾಮಿ ಮಾತನಾಡಿ, ‘ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯದಾದ್ಯಂತ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಸೆ. 15ರಂದು ಮಾನವ ಸರಪಳಿ ಹಾವೇರಿ ತಾಲ್ಲೂಕಿನ ಮರೋಳ ಗ್ರಾಮದಿಂದ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರು ಗ್ರಾಮಕ್ಕೆ ಸಂಪರ್ಕ ಕೊಡಲಿದೆ. ಅಲ್ಲಿಂದ ನಿರ್ಮಾಣಗೊಳ್ಳುವ ಮಾನವ ಸರಪಳಿ ಬಾಲೆಹೊಸೂರು ಮೂಲಕ ಸೂರಣಗಿ, ನೆಲೂಗಲ್ಲ, ಬೆಳ್ಳಟ್ಟಿ, ಸುಗ್ನಳ್ಳಿ, ಬನ್ನಿಕೊಪ್ಪ ಗ್ರಾಮಗಳ ಮೂಲಕ ಮುಂಡರಗಿ ತಾಲ್ಲೂಕಿಗೆ ಸಂಪರ್ಕ ಕೊಡಲಿದೆ. ಅಂದರೆ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ 17 ಕಿ.ಮೀ ಮತ್ತು ಶಿರಹಟ್ಟಿ ತಾಲ್ಲೂಕಿನಲ್ಲಿ 17 ಕಿ.ಮೀ ಮಾನವ ಸರಪಳಿ ಸಂಚರಿಸಲಿದೆ’ ಎಂದರು.