ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧರಾಮಯ್ಯನವರ ಯೋಜನೆ ಜನಸಾಮಾನ್ಯರಿಗೆ ತಲುಪಿಸಿ

ಮಾಜಿ ಶಾಸಕ ಬಿ.ಆರ್.ಯಾವಗಲ್‍ ಹೇಳಿಕೆ
Published 27 ಏಪ್ರಿಲ್ 2024, 16:12 IST
Last Updated 27 ಏಪ್ರಿಲ್ 2024, 16:12 IST
ಅಕ್ಷರ ಗಾತ್ರ

ಬೆಳವಣಿಕಿ (ರೋಣ): ಸಮೀಪದ ಬಳಗಾನೂರ, ಲಿಂಗದಾಳ ಗ್ರಾಮಗಳಲ್ಲಿ ಮಾಜಿ ಶಾಸಕ ಬಿ.ಆರ್.ಯಾವಗಲ್‍ ಅವರು ಬಾಗಲಕೊಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಮತಯಾಚನೆ ನಡೆಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕೇಂದ್ರದಲ್ಲಿಯೂ ಕೂಡ ಕಾಂಗ್ರೆಸ್ ಸರ್ಕಾರದ ಅವಶ್ಯಕತೆ ಇದೆ. ಹಾಗಾಗಿ, ಕರ್ನಾಟಕದಿಂದ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಬೇಕಿದ್ದು, ಬಾಗಲಕೋಟೆ ಅಭ್ಯರ್ಥಿ ಸಂಯುಕ್ತಾ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ಕೇಂದ್ರದಲ್ಲಿರುವ ಮೋದಿ ನೇತೃತ್ವದ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡಿ, ಜನರನ್ನು ವಂಚಿಸಿದೆ. ಜನರನ್ನು ಮೂಢರನ್ನಾಗಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾಗಿದೆ. ಹಾಗಾಗಿ, ಈ ಬಾರಿ ಬದಲಾವಣೆ ಅವಶ್ಯಕತೆ ಇದೆ’ ಎಂದು ಚುನಾವಣಾ ಪ್ರಣಾಳಿಕೆ, ಗ್ಯಾರಂಟಿ ಕಾರ್ಡ್‌ ಬಿಡುಗಡೆ ಮಾಡಿದರು.

ಮುಖಂಡರಾದ ಶೇಖಣ್ಣ ಅಗಶಿಮನಿ ಮಾತನಾಡಿ, ಜನರು ಯೋಜನೆಗಳ ಲಾಭಪಡೆದುಕೊಂಡು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಬೇಕು ಎಂದು ವಿನಂತಿಸಿಕೊಂಡರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ವಿವೇಕ ಯಾವಗಲ್ ಮಾತನಾಡಿದರು.

ಎಸ್.ಬಿ.ಹೊಸಮನಿ, ಡಾ. ಎಂ.ಮೂಗನೂರ, ಬಸವರಾಜ ಚಟ್ರಿ, ಶರಣಬಸಪ್ಪ ಜಾನೋಪಂತ, ಅಶೋಕ ಜಿಣಗಿ, ಎಂ.ವಿ.ಪಾಟೀಲ, ಮಲ್ಲಣ್ಣ ದಾದ್ಮಿ, ಅನೀಲ ದೊಡ್ಡಮನಿ, ಶಿವಪ್ಪ ಮಡಿವಾಳರ, ಸುರೇಶ ಚಿಮ್ಮನಕಟ್ಟಿ, ಫಕ್ಕೀರಪ್ಪ ಗಾರವಾಡ, ಮಹಿಳೆಯರು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT