‘ಕ್ಷೇತ್ರದ ಅಭಿವೃದ್ಧಿಗೆ ಈಗಲೂ ಸಿದ್ದ’
ನನ್ನ ರಾಜಕೀಯ ಜೀವನದಲ್ಲಿ 6 ಖಾತೆಗಳನ್ನು ನಿಭಾಯಿಸಿದ ಅನುಭವ ನನಗಿದೆ. ಕ್ಷೇತ್ರದ ಅಭಿವೃದ್ಧಿಗೆ ಈಗಲೂ ಸಿದ್ದನಿದ್ದೇನೆ. ಆದರೆ ಕಮೀಷನ್ ವಸೂಲಿ ಮಾಡುವವರ ಕಾಟ ಹೆಚ್ಚಾಗಿದ್ದು ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ. ವೈದ್ಯಕೀಯ ಇಲಾಖೆಗೆ ಆಗಮಿಸಿದ ನೂತನ ವೈದ್ಯರೊಬ್ಬರಿಂದ ಪ್ರಭಾವಿ ನಾಯಕರೊಬ್ಬರು ₹35 ಸಾವಿರ ವಸೂಲಿ ಮಾಡಿದ್ದಾರೆ. ಹೊಸದಾಗಿ ಯಾರೇ ಅಧಿಕಾರಿ ಬಂದರೂ ಇವರಿಗೆ ಕಮಿಷನ್ ಕೊಡಲೇಬೇಕು. ಇಂತಹ ಸಂಗತಿಗಳನ್ನು ಎತ್ತಿ ಹಿಡಿದರೆ ವೇದಿಕೆಯಲ್ಲಿ ಸಾರ್ವಜನಿಕವಾಗಿ ಮಾತನಾಡೋಣ ಎಂಬ ಉಡಾಫೆ ಉತ್ತರವನ್ನು ನೀಡುತ್ತಾರೆ. ಮತದಾರರು ಎಲ್ಲವನ್ನು ನೋಡುತ್ತಿದ್ದಾರೆ. ಎಲ್ಲದಕ್ಕೂ ಸಮಯವಿದೆ ಕಾದು ನೋಡೋಣ ಎಂದು ಶಾಸಕ ಪಾಟೀಲ ಹೇಳಿದರು