ಗದಗ: ರಾಜ್ಯಾದ್ಯಂತ ಸರ್ಕಾರ ಗುಟ್ಕಾ ನಿಷೇಧ ಮಾಡಿ ತಿಂಗಳು ಕಳೆದರೂ ಮಾರುಕಟ್ಟೆಯಲ್ಲಿ ದಾಸ್ತಾನು ಇರುವ ಗುಟ್ಕಾ ಮೂರು ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. ವ್ಯಸನಕ್ಕೆ ಅಂಟಿಕೊಂಡಿರುವವರು ದುಪ್ಪಟ್ಟು ನೀಡಿ ಖರೀದಿಸುತ್ತಿದ್ದಾರೆ.

ಸರ್ಕಾರ ಗುಟ್ಕಾ, ಪಾನ್ ಮಸಾಲಾ ನಿಷೇಧಿಸಿ ಆದೇಶ ಹೊರಡಿಸಿ ಬಳಿಕ ಜಿಲ್ಲಾಡಳಿತ ಐದು ತಂಡ ರಚಿಸಿತು. ಅಧಿಕಾರಿಗಳು ಪ್ರತ್ಯೇಕವಾಗಿ ಗುಟ್ಕಾ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾರಾಟ ಮಾಡುತ್ತಿದ್ದ ಗುಟ್ಕಾ ವಶಪಡಿಸಿಕೊಂಡು ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು. ಕೆಲ ದಿನಗಳ ಮಟ್ಟಿಗೆ ಕಾರ್ಯಾಚರಣೆ ಮುಂದುವರೆಯಿತು.

ಆದರೆ ಕಾರ್ಯಾಚರಣೆ ಸದ್ದಡಗಿದ ಬಳಿಕ ಮತ್ತೆ ಮಾರುಕಟ್ಟೆಯಲ್ಲಿ ದಾಸ್ತಾನು ಇರುವ ಗುಟ್ಕಾವನ್ನು ಗುಟ್ಟಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಎಲ್ಲಿ ಗುಟ್ಕಾ ಸಿಗಲಿದೆ ಎಂಬುದು ಗುಟ್ಕಾ ಪ್ರಿಯರಿಗೆ ಗೊತ್ತು.

ಮತ್ತೆ ಕೆಲವರು `ಮಾವಾ' ಮೊರೆ ಹೋಗಿದ್ದಾರೆ. ಸುಣ್ಣ, ನೀರು, ಅಡಕೆ ಚೂರು ಹಾಗೂ ತಂಬಾಕಿನ ಮಿಶ್ರಣವಿರುವ ಪದಾರ್ಥ ಇದು. ಇದನ್ನು ಪ್ಯಾಕ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಅಲ್ಲದೇ ಅಂಗಡಿಗಳಲ್ಲಿ ಪಾನ್ ಮಸಾಲಾ ಸ್ಯಾಚೆ ಜತೆ ತಂಬಾಕಿನ ಪೊಟ್ಟಣ ಕೊಟ್ಟು ಎರಡನ್ನೂ ಮಿಶ್ರಣ ಮಾಡಿ ಸೇವಿಸುವಂತೆ ಸಲಹೆ ನೀಡಲಾಗುತ್ತಿದೆ.

ಇದು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲೂ ಮಸಾಲಾ ಸ್ಯಾಚೆ ಜತೆ ತಂಬಾಕು ಪೊಟ್ಟಣ ನೀಡಲಾಗುತ್ತಿದೆ. ಅಚ್ಚರಿಯೆಂದರೆ ಗುಟ್ಕಾ ಚಟಕ್ಕೆ ವಯಸ್ಸಿನ ಭೇದ ಇಲ್ಲ. ಹಿರಿಯರು, ಮಹಿಳೆಯರು, ಯುವಕರು ಚಟಕ್ಕೆ ಬಿದ್ದು ಗುಟ್ಕಾ ತಿಂದು ಕಂಡಕಂಡಲ್ಲಿ ಅಗಿದುಗಿದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಪೊಟ್ಟಣ ಬಿಸಾಡಿ ಮಾಲಿನ್ಯ ಉಂಟು ಮಾಡಿರುವುದನ್ನು ಈಗಲೂ ಜಿಲ್ಲೆಯಲ್ಲಿ ನೋಡಬಹುದು.

`ಗುಟ್ಕಾ ನಿಷೇಧ ಮಾಡಿರುವುದರಿಂದ ತೊಂದರೆಯಾಗಿದೆ. ಮಾರುಕಟ್ಟೆಯಲ್ಲಿ ದಾಸ್ತಾನು ಮಾಡಿರುವ ಗುಟ್ಕಾ ಖಾಲಿ ಮಾಡಬೇಕು. ಅದಕ್ಕೆ ವ್ಯಾಪಾರಿಗಳು ಅಧಿಕಾರಿಗಳ ಕಣ್ಣು ತಪ್ಪಿಸಿ ಮೂರು, ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಗುಟ್ಕಾ ಬಿಟ್ಟು ಇರಲು ಆಗುವುದಿಲ್ಲ. ಅನಿವಾರ್ಯವಾಗಿ ಹೆಚ್ಚಿನ ಬೆಲೆಗೆ ಕೊಂಡುಕೊಳುತ್ತೇವೆ' ಎನ್ನುತ್ತಾರೆ ಗುಟ್ಕಾ ಚಟಕ್ಕೆ ದಾಸರಾಗಿರುವ ಮಾಲೇಪ್ಪನವರ.

ಈ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಅಧಿಕಾರಿ ಡಾ.ಸತೀಶ ಬಸರಿಗಡದ, `ಗುಟ್ಕಾ ನಿಷೇಧ ಬಳಿಕ ಜಿಲ್ಲಾಡಳಿತ ಆಹಾರ ಇಲಾಖೆ, ಪೊಲೀಸ್, ಅಬಕಾರಿ ಮತ್ತು ಆರೋಗ್ಯ ಇಲಾಖೆ ಒಳಗೊಂಡ ತಂಡ ರಚಿಸಿತು. ಕಿರಾಣಿ ಅಂಗಡಿ, ಪಾನ್ಶಾಪ್ ಸೇರಿದಂತೆ ಗುಟ್ಕಾ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಗುಟ್ಕಾ ವಶಪಡಿಸಿಕೊಂಡು ನಾಶ ಮಾಡಲಾಯಿತು. ಯಾರ ವಿರುದ್ಧವೂ ಪ್ರಕರಣ ದಾಖಲಿಸುತ್ತಿಲ್ಲ.

ಎಚ್ಚರಿಕೆ ನೀಡಿ ಬಿಡಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗುಟ್ಕಾ ದುಷ್ಪರಿಣಾಮ ಕುರಿತು ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗುಟ್ಕಾ ತಯಾರಿಸುವ ಘಟಕ ಇಲ್ಲ. ಗುಟ್ಟಾಗಿ ಗುಟ್ಕಾ ಮಾರಾಟ ಮಾಡುವ ಬಗ್ಗೆ ಇದವರೆಗೂ ಯಾವುದೇ ದೂರು ಬಂದಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು' ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.