ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಂಬರ ದಿಸೆಯಿಂದಲೇ ಜಿಲ್ಲೆಗೆ ಬಂದ ಆರ್ಯರು: ಸಿ.ಮಹದೇವ ವಿಶ್ಲೇಷಣೆ

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಸಿ.ಮಹದೇವ ವಿಶ್ಲೇಷಣೆ
Last Updated 23 ಜನವರಿ 2020, 14:04 IST
ಅಕ್ಷರ ಗಾತ್ರ

ಶಿವಮೊಗ್ಗ: ಕದಂಬ ಸಾಮ್ರಾಜ್ಯ ಸ್ಥಾಪನೆಗೂ ಮೊದಲು ಶಿವಮೊಗ್ಗ ಜಿಲ್ಲೆಯಲ್ಲಿಆರ್ಯರ ಅಸ್ತಿತ್ವ ಇರಲಿಲ್ಲ. ಮಯೂರು ಶರ್ಮ ಉತ್ತರದಭಾರತದಿಂದ 32ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬವನ್ನು ಕರೆತಂದು, ನೆಲೆ ನೀಡಿದ್ದರು ಎಂದುಹಂಪಿ ಕನ್ನಡ ವಿಶ್ವ ವಿದ್ಯಾಲಯದಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಸಿ.ಮಹದೇವ ವಿಶ್ಲೇಷಿಸಿದರು.

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿಗುರುವಾರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗಹಮ್ಮಿಕೊಂಡಿದ್ದಕರ್ನಾಟಕದ ಸಮಾಜೋ ಧಾರ್ಮಿಕಸ್ಥಿತಿಗತಿಗಳು ಮರುಚಿಂತನೆ ಮತ್ತು ಬಹುಶಾಸ್ತ್ರೀಯ ನೆಲೆಯ ಸಂಶೋಧನಾ ಸಾಧ್ಯತೆಗಳು ಕುರಿತ ಕಾರ್ಯಾಗಾರದಲ್ಲಿಅವರು ಮಾತನಾಡಿದರು.

ಅಂದಿನಿಂದ ಜಿಲ್ಲೆಯಲ್ಲೂ ಅಗ್ರಹಾರಗಳು ಆರಂಭವಾದವು. ಶರಣರ ಕಾಲದಲ್ಲಿ ಅಗ್ರಹಾರಗಳ ಸಂಖ್ಯೆ ಇಳಿಮುಖವಾಗಿತ್ತು ಎಂದುವಿವರ ನೀಡಿದರು.

ಇತಿಹಾಸದ ಮರುಚಿಂತನೆಯ ಅಗತ್ಯವಿದೆ. ಈಗ ಲಭ್ಯವಿರುವ ಶಿಲ್ಪ, ಸಾಹಿತ್ಯ, ತಾಳೆಗರಿ ಸಂಶೋಧನೆಗಳು ಪರಿಪೂರ್ಣ ಅಲ್ಲ. ಇತರೆ ಎಲ್ಲಾ ಭಾಷೆಗಳಲ್ಲಿ ಇರುವ ಇತಿಹಾಸ ಕನ್ನಡಕ್ಕೆ ಭಾಷಾಂತರಿಸಬೇಕು. ಆಗ ಹೆಚ್ಚಿನ ಮಹತ್ವ ಸಿಗುತ್ತದೆ ಎಂದು ಪ್ರತಿಪಾದಿಸಿದರು.

ಸೃಜನಶೀಲ, ಸ್ವಾತಂತ್ರ ಆಲೋಚನೆ ಸಂಶೋಧನೆಗಳಿಗೆ ಅರ್ಥಕೊಡಬಲ್ಲದು. ಸಾಮಾನ್ಯವಾಗಿ ಇತಿಹಾಸಕಾರರುವೀರಗಲ್ಲು, ಸತಿಗಲ್ಲುಗಳನ್ನು ಬಿಟ್ಟು ಆಚೆ ಬರುವುದಿಲ್ಲ ಎಂಬ ಆರೋಪವಿದೆ. ಪರಿಸ್ಥಿತಿಗೆ ತಕ್ಕಂತೆ ಪ್ರಾಚೀನ ಇತಿಹಾಸ ಮರುಕಟ್ಟುವ ಕೆಲಸ ವಿಶ್ವವಿದ್ಯಾಲಯದ ಹಲವು ಇತಿಹಾಸ ತಜ್ಞರು ಮಾಡುತ್ತಿದ್ದಾರೆ. ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾರ್ಯಾಗಾರಗಳ ಮೂಲಕ ಪ್ರಾಚೀನ ಇತಿಹಾಸದ ಅರಿವುವಿಸ್ತರಿಸಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ್, ಜನಪದರ ಜ್ಞಾನ ಗೌರವಿಸುವ ಪ್ರಯತ್ನ ಹಂಪಿ ವಿಶ್ವವಿದ್ಯಾಲಯಮಾಡುತ್ತಿದೆ. ಜನಕಲ್ಯಾಣಕ್ಕಾಗಿ ದುಡಿಯಬೇಕು ಎಂಬ ಧ್ಯೇಯ ಅಂದು ಇತ್ತು.ಜನಪದರು ಮತ್ತು ಶಿಷ್ಟರು ಸಮಾಜ ಕಟ್ಟುವ ಕಾರ್ಯವಾಗಬೇಕು ಎಂದು ಪ್ರತಿಪಾದಿಸುತ್ತಿದ್ದರು.ತತ್ವ ಸಿದ್ಧಾಂತ, ಚರ್ಚೆಗಳು ಜನರ ಬದುಕು ಕಟ್ಟಲು ಸಹಕಾರಿಯಾಗುತ್ತವೆ. ವಚನಗಳ ಅಧ್ಯಯನದಿಂದ ಹಲವು ವಿಷಯ ತಿಳಿಯಬಹುದು. ಸಂಶೋಧನೆಗಳು ಒಂದೇಒಂದುದೃಷ್ಟಿಕೋನಕ್ಕೆ ಸೀಮಿತವಾಗದೇ ಸಮಗ್ರ ಆಯಾಮ ಹೊಂದಿರಬೇಕು.ಆಗ ಹೆಚ್ಚಿನ ಅರಿವು ಪಡೆಯಲು ಸಾಧ್ಯ ಎಂದರು.

ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ ನಾಯಕ, ಲಲಿತಕಲೆಗಳ ನಿಕಾಯದ ಡೀನ್ ಪ್ರೊ.ಕೆ.ರವೀಂದ್ರನಾಥ, ಸಹ್ಯಾದ್ರಿ ಕಲಾ ಕಾಲೇಜು ಪ್ರಾಂಶುಪಾಲ ಡಾ.ಧನಂಜಯ, ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಡಾ.ಶಶಿರೇಖಾ, ಕೆ.ಎನ್.ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT