ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೂಲಭೂತ ಸೌಕರ್ಯಕ್ಕೆ ₹ 1ಲಕ್ಷ ಕೋಟಿ ಮೀಸಲು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೃಷಿ ಸಚಿವ ಹಾಗೂ ಅಧಿಕಾರಿಗಳ ಜತೆ ಆ.27ರಂದು ಬೆಂಗಳೂರಿನಲ್ಲಿ ಸಭೆ
Last Updated 17 ಆಗಸ್ಟ್ 2021, 14:24 IST
ಅಕ್ಷರ ಗಾತ್ರ

ಹಾಸನ: ಕೃಷಿ ಮೂಲಭೂತ ಸೌಕರ್ಯಕ್ಕೆ ಕೇಂದ್ರ ಬಜೆಟ್‌ನಲ್ಲಿ ಒಂದು ಲಕ್ಷ ಕೋಟಿ ರೂಪಾಯಿಮೀಸಲಿರಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾಕರಂದ್ಲಾಜೆ ಹೇಳಿದರು.

ಜನಾಶೀರ್ವಾದ ಯಾತ್ರೆ ಅಂಗವಾಗಿ ಮಂಗಳವಾರ ನಗರದ ಎಚ್‌ಎಂಟಿ ಭವನದಲ್ಲಿ ಏರ್ಪಡಿಸಿದ್ದಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲ ಬಾಧೆಯಿಂದ ರೈತರು ಆತ್ಮಹತ್ಯೆಮಾಡಿಕೊಳ್ಳುತ್ತಿದ್ದಾರೆ. ಆದರೆ ಕೃಷಿ ಜತೆ ಹಸು, ಜೇನು, ಮೀನು ಸಾಕಣಿಕೆಯಲ್ಲಿ ತೊಡಗಿಸಿಕೊಂಡಿರುವರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿದಿದೆ.
ಸಮಿಶ್ರ ಬೆಳೆ ಪದ್ಧತಿಗೆ ಸಬ್ಸಿಡಿ, ಸಾಲ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.

ಅರಣ್ಯ ಇಲಾಖೆ ಕಠಿಣ ಕಾನೂನುಗಳಿಂದ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬೆಳೆಸಿದ ಮರ ಕಡಿಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಇದರಿಂದ ರೈತರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ರೈತರು ತಮ್ಮಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಸೇರಿದಂತೆ ಎಲ್ಲ ರೀತಿಯ ಮರಗಳನ್ನು ಕಡಿದು ಸಾಗಾಟಮಾಡುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈಗಿರುವ ಕಾಯ್ದೆ ಸಡಿಲಗೊಳಿಸುವ ಪ್ರಯತ್ನನಡೆಯುತ್ತಿದೆ ಎಂದು ವಿವರಿಸಿದರು.

‘ನಾವು ಸೇವಿಸುವ ಖಾದ್ಯ ತೈಲ ಕಲಬೆರಕೆ ಇದೆ. ಹಾಗಾಗಿ ಖಾದ್ಯ ತೈಲದಲ್ಲಿ ಸ್ವಾವಲಂಬನೆ ಸಾಧಿಸುವಉದ್ದೇಶದಿಂದ ಎಣ್ಣೆ ಬೀಜವನ್ನು ಉಚಿತವಾಗಿ ನೀಡಲಾಗುವುದು. ಸಣ್ಣ ಉದ್ದಿಮೆ ಆರಂಭಿಸಲು ನೆರವು ಸಹನೀಡಲಾಗುವುದು’ ಎಂದರು.

ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆ.27ರಂದು ಕೃಷಿ ಸಚಿವ ಬಿ.ಸಿ.ಪಾಟೀಲ, ಕೇಂದ್ರಮತ್ತು ರಾಜ್ಯದ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಮುಂದಿನ ದಿನಗಳಲ್ಲಿಜಿಲ್ಲಾವಾರು ಸಭೆ ನಡೆಸಲಾಗುವುದು. ರೈತರ ಆದಾಯ ದ್ವಿಗುಣ ಹೆಚ್ಚಿಸುವ ಗುರಿ ಇದೆ. ಕೋವಿಡ್‌ನಿಂದಸ್ವಲ್ಪ ತೊಂದರೆ ಆಗಿದೆ ಎಂದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಪಕ್ಷ ಸಂಘಟನೆ ಜತೆಗೆ ಕೃಷಿ ಸಮಸ್ಯೆಗೆ ಪರಿಹಾರಕಂಡುಕೊಳ್ಳಲು ಶೋಭಾ ಕರಂದ್ಲಾಜೆ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದರು.

ಶಾಸಕ ಪ್ರೀತಂ ಗೌಡ ಮಾತನಾಡಿ, ದೇಶ ಸಂಕಷ್ಟದ ಸಮಯದಲ್ಲಿ ಇರುವಾಗಲೂ ವಿರೋಧ ಪಕ್ಷಗಳುಕ್ಷುಲ್ಲಕ ಕಾರಣ ಇಟ್ಟುಕೊಂಡು ಅಧಿವೇಶನ ನಡೆಸಲು ಅವಕಾಶ ನೀಡಲಿಲ್ಲ. ಸಾಮಾನ್ಯ ಕಾರ್ಯಕರ್ತರುಕೇಂದ್ರ ಸಚಿವರಾಗಬಹುದು ಎಂಬುದಕ್ಕೆ ಶೋಭಾ ಅವರೇ ಸಾಕ್ಷಿ ಎಂದು ನುಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಸುರೇಶ್‌ ಅವರು ಜಿಲ್ಲೆಯಲ್ಲಿ ಬೆಳೆ ನಷ್ಟ, ಕಾಡು ಪ್ರಾಣಿಗಳಹಾವಳಿ, ಸಾಲ ಮರುಪಾವತಿ ಅವಧಿ ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿನೀಡಿದರು.

ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಸ್ವಾಗತಿಸಿದರು. ವಿಧಾನ ಪರಿಷತ್‌ ಸದಸ್ಯ ತುಳಸಿಮುನಿರಾಜೇಗೌಡ, ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್‌, ಸಹ ಪ್ರಭಾರಿ ನಿಜಗುಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT