ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 100 ಕೋಟಿ ವಿಶೇಷ ಅನುದಾನ ನೀಡಿ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಆಗ್ರಹ
Last Updated 9 ಆಗಸ್ಟ್ 2021, 4:28 IST
ಅಕ್ಷರ ಗಾತ್ರ

ಹಾಸನ: ‘ಸಕಲೇಶಪುರ, ಆಲೂರು ಭಾಗದಲ್ಲಿ ಸುರಿದ ಭಾರಿ ಮಳೆಯಿಂದಅಪಾರ ಆಸ್ತಿ, ಪಾಸ್ತಿ ಹಾನಿಯಾಗಿದೆ. ಮುಖ್ಯಮಂತ್ರಿ ಈ ಕೂಡಲೇ ನಿಯೋಗಕಳಿಸಿ ಸಮೀಕ್ಷೆ ನಡೆಸಿ, ಕ್ಷೇತ್ರಕ್ಕೆ ಅಂದಾಜು ₹ 100 ಕೋಟಿ ವಿಶೇಷಪ್ಯಾಕೇಜ್‌ ನೀಡಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಆಗ್ರಹಿಸಿದರು.

‘ಜಿಲ್ಲಾಡಳಿತ ಮಾಹಿತಿ ಪ್ರಕಾರ ಅತಿವೃಷ್ಟಿಯಿಂದ 2017ರಲ್ಲಿ ₹ 321ಕೋಟಿ, 2018ರಲ್ಲಿ ₹ 178 ಕೋಟಿ, 2019ರಲ್ಲಿ ₹ 160 ಕೋಟಿ,2021ರಲ್ಲಿ ₹ 78 ಕೋಟಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಸಿ.ಎಂ ಪ್ರವಾಹ ಪೀಡಿತ ಕಾರವಾರಕ್ಕೆ ಭೇಟಿ ನೀಡಿದ್ದಾರೆ. ಅದೇ ರೀತಿ ಜಿಲ್ಲೆಗೂ ಭೇಟಿನೀಡಬೇಕು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.‌

‘ಸಕಲೇಶಪುರ ಕ್ಷೇತ್ರದಲ್ಲಿ 39 ಸಣ್ಣ ಸೇತುವೆ ಹಾಗೂ ಕಾಲು ಸಂಕಗಳ ನಿರ್ಮಾಣ ಮಾಡಬೇಕಿದೆ. ಕಾಫಿ, ಏಲಕ್ಕಿ, ಮೆಣಸು, ಭತ್ತಕ್ಕೆ ಸಾಕಷ್ಟು ಹಾನಿಯಾಗಿದೆ. ₹ 20 ರಿಂದ ₹ 50 ಲಕ್ಷ ಅನುದಾನ ನೀಡಲು ಹಿಂದೇಟುಹಾಕಿದರೆ, ಜನ ಪ್ರಾಣ ಕಳೆದುಕೊಂಡಾಗ ಲಕ್ಷಾಂತರ ರೂಪಾಯಿ ಪರಿಹಾರನೀಡಬೇಕಾಗುತ್ತದೆ. ಜಿಲ್ಲೆಯಲ್ಲಿ ಅಂದಾಜು 350 ಕಿ.ಮೀ ರಸ್ತೆ ಹಾಳಾಗಿವೆ.ಸಕಲೇಶಪುರ ಕ್ಷೇತ್ರದಲ್ಲಿಯೇ 225 ಕಿ.ಮೀ ರಸ್ತೆ ಹಾಳಾಗಿದೆ.ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಒಂದು ಕಿ.ಮೀ. ರಸ್ತೆ ದುರಸ್ತಿಗೆನೀಡುವ ಅನುದಾನ ತೀರಾ ಕಡಿಮೆ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘‌ವಿದ್ಯುತ್‌ ತಂತಿಗಳನ್ನು ತುಳಿದು ನಾಲ್ಕು ಹಸುಗಳು ಮೃತಪಟ್ಟಿವೆ. ಕಾಡಾನೆಸಮಸ್ಯೆ ಇರುವ ಭಾಗದಲ್ಲಿ ವಿದ್ಯುತ್‌ ತಂತಿ ಜೋತು ಬೀಳದಂತೆ ಕ್ರಮವಹಿಸಲು ಕ್ಷೇತ್ರಕ್ಕೆ 5 ರಿಂದ 10 ಸಾವಿರ ವಿದ್ಯುತ್‌ ಕಂಬಗಳನ್ನು ನೀಡಬೇಕು. ಇದರಿಂದ ಕಂಬಗಳ ನಡುವೆ ಅಂತರ ಕಡಿಮೆ ಆಗಲಿದೆ’ ಎಂದರು.

‌‘ರಾಜ್ಯಕ್ಕೆ ಕಡಿಮೆ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರುಜಿಲ್ಲಾಧಿಕಾರಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ರಾಜ್ಯಕ್ಕೆಅಗತ್ಯ ಇರುವಷ್ಟು ಕೋವಿಡ್‌ ಲಸಿಕೆ ನೀಡುವಂತೆ ಕೇಂದ್ರಕ್ಕೆ ಒತ್ತಡ ಹೇರಬೇಕಿದೆ. ಕೋವಿಡ್‌ ಸಂದರ್ಭದಲ್ಲಿ ಎನ್‌ಡಿಆರ್‌ಎಫ್‌ ನಿಧಿಯಿಂದ ರಾಜ್ಯಕ್ಕೆ ₹ 660 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಜಿಲ್ಲೆಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ. ಹಣ ಇಟ್ಟುಕೊಂಡು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಮಂಗಳೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹಾಸನದಿಂದ ಹೆಗ್ಗದ್ದೆ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶೇಕಡಾ 25 ರಷ್ಟು ಮುಗಿದಿದೆ. ರಸ್ತೆ ಕಾಮಗಾರಿಗೆ ನೀಡಿದ್ದ ಗಡುವು ಈಗಾಗಲೇ ಮುಗಿದಿದೆ. ಮಳೆಯಿಂದ ರಸ್ತೆ ಗುಂಡಿ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಈಗ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ರಾಷ್ಟ್ರೀಯ ಹೆದ್ದಾಗಿ 75ರ ಕಾಮಗಾರಿಪೂರ್ಣಗೊಳ್ಳಲು ಎರಡು ವರ್ಷ ಸಮಯ ಬೇಕಾಗಬಹುದು’ ಎಂದು ಹೇಳಿದರು.

‌‘ಸಕಲೇಶಪುರ ತಾಲ್ಲೂಕು ಹಾನುಬಾಳ್‌ನಲ್ಲಿರುವ ಡಿಸಿಸಿ ಬ್ಯಾಂಕ್‌ಶಾಖೆ ಸತತ ನಷ್ಟವಾಗುತ್ತಿದೆ ಎಂಬ ಕಾರಣಕ್ಕೆ ರದ್ದು ಮಾಡುವುದು ಬೇಡ.ಜನರ ಹಿತದೃಷ್ಟಿಯಿಂದ ರದ್ದತಿ ಆದೇಶ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್‌,ನಿರ್ದೇಶಕ ಬಿದಿರೇಕೆರೆ ಜಯರಾಂ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷಎಸ್‌.ದ್ಯಾವೇಗೌಡ, ರಘು ಹೊಂಗೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT