ಗುರುವಾರ , ಆಗಸ್ಟ್ 11, 2022
22 °C

ಗಾಂಜಾ ಮಾರಾಟ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರು: ಗಾಂಜಾ ಸೇವನೆ ಹಾಗೂ ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಜನರನ್ನು ಬೇಲೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ ಬದ್ರಿಯಾ ಸಾಮೀಲ್ ಹಿಂಭಾಗ ಗಾಂಜಾ ಸೇವನೆ ಹಾಗೂ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಬೇಲೂರು ಪೊಲೀಸರ ತಂಡ, ಐವರು ಆರೋಪಿಗಳಾದ ಚಿಕ್ಕಮಗಳೂರಿನ ಮೊಹಿನುದ್ದೀನ್, ಬೇಲೂರು ಪಟ್ಟಣದ ತಸ್ಲೀಮ್ ಪಾಷಾ, ಇಸ್ಮಾಯಿಲ್, ಹಳೇಬೀಡು ರಸ್ತೆಯ ಸಂತು ಹಾಗೂ ಹೆಬ್ಬಾಳು ಗ್ರಾಮದ ಚಂದ್ರಪ್ಪ ಎಂಬುವವರನ್ನು ಬಂಧಿಸಿ ಅವರಿಂದ 350 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಹಶೀಲ್ದಾರ್ ನಟೇಶ್, ಪಿಎಸ್‍ಐ ಅಜಯ್‍ಕುಮಾರ್, ಎಎಸ್‍ಐ ನಾಗರಾಜ್, ಸಿಬ್ಬಂದಿ ಮನು, ಚಿತ್ರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.