ಅರಕಲಗೂಡು: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ 10ಕ್ಕೂ ಹೆಚ್ಚಿನ ಕೆರೆಗಳು ಕೋಡಿ ಬಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.

ಬೆಳವಾಡಿಯ ಹಿರೆಕೆರೆ, ಕೋಟೆ ಕರ್ಪೂರವಳ್ಳಿ ಗ್ರಾಮಗಳಲ್ಲಿ ಕೆರೆಗಳ ಕೋಡಿ ಬಿದ್ದು ತಗ್ಗಿನ ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಮುತ್ತಿಗೆ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು, ಸಂತೆ ಮರೂರು ರಸ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ತಗ್ಗುಪ್ರದೇಶದ ಮೂರುಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಮಳೆಯಿಂದಾಗಿ ಸೀಬಳ್ಳಿ, ಹಾನಗಲ್ಲು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಾಶೀಪುರದಲ್ಲಿಯೂ ಕೆರೆ ಕೋಡಿ ಬಿದ್ದು, ತಗ್ಗುಪ್ರದೇಶದ 80 ಎಕರೆ ಪ್ರದೇಶದ ಅಡಿಕೆ ತೋಟಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ.

‘ಕೆರೆ ಏರಿಯ ಮೇಲೆ ನೀರು ಹರಿಯುತ್ತಿದ್ದು ಗೌರಿಕೊಪ್ಪಲು, ಸೀರೆಗೌಡನಕೊಪ್ಪಲು, ಅಂಕನಾಯಕನಹಳ್ಳಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹೊನ್ನವಳ್ಳಿ ಬಳಿ 6 ಕರೆಗಳು ಮಳೆಯಿಂದಾಗಿ ಕೋಡಿ ಬಿದ್ದು, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ರೈತರಿಗೆ ಸೂಕ್ತ ಪರಿಹಾರ ದೊರಕಿಸುವಂತೆ’ ರೈತ ಸಂಘದ ಕಾರ್ಯಾಧ್ಯಕ್ಷ ಭುವನೇಶ್ ಆಗ್ರಹಿಸಿದ್ದಾರೆ.

ತಾಲ್ಲೂಕಿನಾದ್ಯಂತ ಸಾವಿರಾರು ಎಕೆರೆ ಪ್ರದೇಶದ ಭತ್ತ, ಜೋಳ, ಶುಂಠಿ, ಅಡಿಕೆ ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೆಬ್ಬಾಲೆ ಕೊಪ್ಪಲು, ಯಗಟಿ ಗ್ರಾಮಗಳಲ್ಲಿ ತಗ್ಗು ಪ್ರದೇಶದ ಮನೆಗಳು ಹಾಗೂ ಪಟ್ಟಣದ ಹೆಂಟಗೆರೆ ರಸ್ತೆ ಗ್ಯಾರೇಜಿಗೆ ನೀರು ನುಗ್ಗಿ ಹಾನಿಯಾಗಿದೆ.

ಶಾಸಕ ಎ.ಮಂಜು, ಗ್ರೇಡ್ -2 ತಹಶೀಲ್ದಾರ್ ಸಿ.ಸ್ವಾಮಿ, ತಾ.ಪಂ ಇಒ ಶ್ರೀನಿವಾಸ್ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಮಂಜು ಮಾತನಾಡಿ, ‘ಭಾರಿ ಮಳೆಗೆ ಕೆರೆಗಳು ಕೋಡಿ ಬಿದ್ದಿವೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸ್ಥಳಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ’ ಹೇಳಿದರು.

ಗ್ರೇಡ್ 2 ತಹಶೀಲ್ದಾರ್ ಸಿ.ಸ್ವಾಮಿ, ಹಾನಿಗೊಳಗಾಗಿರುವವರಿಗೆ ತಾತ್ಕಾಲಿಕ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಳೆ ವಿವರ

ಅರಕಲಗೂಡು 11 ಸೆಂ.ಮೀ ಮಲ್ಲಿಪಟ್ಟಣ 4.3 ಸೆಂ.ಮೀ ದೊಡ್ಡಮಗ್ಗೆ 1.8 ಸೆಂ.ಮೀ ಕೊಣನೂರು 3.7 ಸೆಂ.ಮೀ ರಾಮನಾಥಪುರ 6.8 ಸೆಂ.ಮೀ ಬಸವಾಪಟ್ಟಣ 5.9 ಸೆಂ.ಮೀ ದೊಡ್ಡಬೆಮ್ಮತ್ತಿ 4.8 ಸೆಂ.ಮೀ ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.