ಅರಸೀಕೆರೆ: ನಗರದ ಮುಜಾವರ್ ಮೊಹಲ್ಲಾದಲ್ಲಿ ಇಬ್ಬರು ಪೋಷಕರ ಮಕ್ಕಳ ನಡುವಿನ ಕ್ಷುಲ್ಲಕ ಜಗಳವು ಒಬ್ಬ ಪೋಷಕರ ಕೊಲೆಯಲ್ಲಿ ಕೊನೆಯಾಗಿದೆ.

ತೌಫಿಕ್ (30) ಕೊಲೆಯಾದವರು. ತೌಫಿಕ್ ಹಾಗೂ ಫರಾನ್ ಅವರ ಪುತ್ರರು ನಗರದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆ. 25ರಂದು ಶಾಲೆಯ ಆವರಣದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಅದರ ಬೆನ್ನಲ್ಲೇ ಎರಡೂ ಕುಟುಂಬಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿತ್ತು.

4 ದಿನಗಳ ಹಿಂದೆ ನಗರದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯ ಬಳಿ ಪೋಷಕರಿಬ್ಬರು ಜಗಳವಾಡಿದ್ದರು. ಮಕ್ಕಳ ಜಗಳದ ವಿಚಾರ ಚರ್ಚಿಸುವಾಗ, ಗಲಾಟೆ ತೀವ್ರಗೊಂಡು, ಫರಾನ್, ತೌಫಿಕ್ ಅವರನ್ನು ತಳ್ಳಿದ್ದರು. ಮೆಟ್ಟಿಲುಗಳಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ತೌಫಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ ಅವರು ಮೃತಪಟ್ಟರು.

ನಂತರ ತೌಫಿಕ್ ಕುಟುಂಬಸ್ಥರು, ಫರಾನ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮನೆ ಜಖಂಗೊಂಡಿದ್ದು, ಅಲ್ಲಿದ್ದ ಕಾರಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಿಂದ ಮುಜಾವರ್ ಮೊಹಲ್ಲಾದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.