ಹಾಸನ: ‘ಕನ್ನಡದ ವಿಮರ್ಶೆಯ ಆತ್ಮವಿಮರ್ಶೆಗೆ ಈ ಪ್ರಶಸ್ತಿ ಪ್ರೇರಣೆ ಆಗಬೇಕು. ಅನೇಕ ಲೇಖಕರ ಬಗ್ಗೆ ಸರಿಯಾದ ವಿಮರ್ಶೆ ಬಂದಿಲ್ಲ. ಚಳವಳಿಗಳಿಂದ ಬಂದವರ ಸಾಹಿತ್ಯವನ್ನು ಸರಿಯಾಗಿ ವಿಮರ್ಶೆ ಮಾಡಲಾಗಿದೆಯೇ ಎಂಬ ಪ್ರಶ್ನೆ ನಾವು ಕೇಳಲೇಬೇಕಾಗಿದೆ’ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಬೂಕರ್ ಪ್ರಶಸ್ತಿ ಪಡೆದಿರುವ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರಿಗೆ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘1976 ರಲ್ಲಿ ಮೊದಲ ಕಥಾಸಂಕಲನಕ್ಕೆ ನನಗೆ ಮೊದಲ ಪ್ರಶಸ್ತಿ ಬಂತು. ನಂತರ ಚಳವಳಿಗಳಲ್ಲಿ ಸೇರಿಕೊಂಡಿದ್ದರಿಂದ ಪ್ರಶಸ್ತಿಗಳು ಬರಲೇ ಇಲ್ಲ. ನಮ್ಮನ್ನು ಅನುಮಾನದಿಂದ ನೋಡಿದರೆ ಹೊರತು, ಸಾಹಿತ್ಯವನ್ನು ನೋಡಲಿಲ್ಲ. ಚಳವಳಿ ಮಾಡಿದವರೂ ಒಳ್ಳೆಯ ಸಾಹಿತ್ಯ ಬರೆಯಬಲ್ಲರು ಎಂಬುದು ಬೂಕರ್ ಪ್ರಶಸ್ತಿಯಿಂದ ಸಾಬೀತಾಗಿದೆ’ ಎಂದರು.

‘ಇಂಗ್ಲಂಡ್ನಲ್ಲಿ ನಮ್ಮ ನೆಂಟರು ಇರದೇ ಇರುವುದರಿಂದ ಪ್ರಶಸ್ತಿ ಬಂದಿದೆ. ಸಾಹಿತ್ಯ ಲೋಕ ಆತ್ಮವಿಮರ್ಶೆ ಮಾಡಿಕೊಳ್ಳಲು ಬಾನು ಮುಷ್ತಾಕ್ ಪಡೆದಿರುವ ಬೂಕರ್ ಪ್ರಶಸ್ತಿ ಸಾಧನವಾಗಲಿ’ ಎಂದರು.

‘ಜಾತಿ, ಧರ್ಮ, ಪಂಥ, ಪಕ್ಷ ಎಲ್ಲಕ್ಕೂ ಒಳವಿಮರ್ಶಕರು ಬೇಕಾಗಿದ್ದಾರೆ. ನಿಜವಾದ ಸಂಸ್ಕೃತಿ, ಸಾಹಿತ್ಯ ಸದಾ ಚಲನಶೀಲವಾದದ್ದು. ಗಾಂಧಿ, ವಿವೇಕಾನಂದ ಹಿಂದೂ ಧರ್ಮದ ಒಳವಿಮರ್ಶಕರಾಗಿದ್ದರು’ ಎಂದು ಹೇಳಿದರು.

‘ಬಾನು ಮುಷ್ತಾಕ್ ಅವರು ತಮ್ಮನ್ನು ಒಳವಿಮರ್ಶಕಿ ಎಂದು ಭಾವಿಸಿರುವುದು ಒಳ್ಳೆಯದು. ಜಡತೆ ಮೀರಿದ ಚಲನಶೀಲತೆ ಬೇಕು. ಅದಕ್ಕಾಗಿ ಜಾತಿ, ಧರ್ಮ, ಪಂಥಗಳಲ್ಲಿ ಒಳವಿಮರ್ಶೆ ಬೇಕಾಗಿದೆ. ಪ್ರಭುತ್ವಕ್ಕೆ ಸಾಹಿತಿಗಳು ಯಾವತ್ತೂ ವಿಮರ್ಶಕರೇ. ಆ ವಿವೇಕ, ಒಳವಿಮರ್ಶೆ, ಪ್ರಜಾಸತ್ತಾತ್ಮಕ ಸಂವಾದ ಉಳಿದಾಗ ಮಾತ್ರ ದೇಶ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬೂಕರ್ ಪ್ರಶಸ್ತಿ ಬಂದ ನಂತರ ಓದುಗರ ಸಂಖ್ಯೆ ಹೆಚ್ಚಾಗಿದ್ದು ಸಂತೋಷದ ಸಂಗತಿ. ಇದೆಲ್ಲ ಕೀರ್ತಿ ಬಂದಿದ್ದು ಬಾನು ಮುಷ್ತಾಕ್ ಅವರು ಬರೆದ ಕತೆಗಳಿಂದ ಹಾಗೂ ದೀಪಾ ಭಾಸ್ತಿ ಅವರ ಅನುವಾದದಿಂದ’ ಎಂದರು.

‘ಪರ ವಿಚಾರ, ಪರ ಧರ್ಮ, ಪರ ವ್ಯಕ್ತಿಗಳನ್ನು ಸಹಿಸುವ ಗುಣ ಹೆಚ್ಚಾಗಿ ಬೆಳೆಯಲಿ. ಬಾನು ಮುಷ್ತಾಕ್ ಅವರಿಗೆ ಆಶ್ರಯ ಬೇಕೆ ಎಂದು ಅವರನ್ನು ಕೇಳಿದಾಗ, ‘ಎಲ್ಲ ದೇಶಗಳಲ್ಲಿ ಸಮಸ್ಯೆಗಳಿವೆ. ನಮ್ಮ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ನಾನು ಭಾರತದಲ್ಲಿಯೇ ಇರುತ್ತೇನೆ’ ಎಂದು ಅವರು ಹೇಳಿದರಲ್ಲ, ಅದು ನಿಜವಾದ ದೇಶ ಭಕ್ತಿ’ ಎಂದು ಬಣ್ಣಿಸಿದರು.

‘ಮೊಟ್ಟ ಮೊದಲ ಕನ್ನಡ ಶಾಸನ ಸಿಕ್ಕಿದ್ದು ಹಾಸನದಲ್ಲಿ. ಅದೇ ರೀತಿ ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ದೊರೆತಿರುವುದು ಹಾಸನ ಜಿಲ್ಲೆಯಿಂದಲೇ. ಹೀಗಾಗಿ ಹಾಸನ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ’ ಎಂದರು.

ಕನ್ನಡ ಸಾಹಿತ್ಯ ಕೊಟ್ಟಿರುವ ವೈಚಾರಿಕ ವಿಸ್ತಾರವನ್ನು ಮತ್ತಷ್ಟು ವಿಸ್ತರಿಸಿದ್ದು ಚಳವಳಿಗಳು. ಸಾಹಿತ್ಯ ಮನೋಧರ್ಮ ಬದಲಿಸಲು ಒತ್ತು ಕೊಟ್ಟಿವೆ. ಅಂತಹ ಚಳವಳಿಗಳ ಒಡನಾಡಿ ಆಗಿರುವ ಬಾನು ಮುಷ್ತಾಕ್ ಅವರಿಗೆ ಪ್ರಶಸ್ತಿ ಬಂದಿರುವುದು ನಾಡಿನ ಚಳವಳಿಗಳಿಗೆ ಸಿಕ್ಕಿರುವ ಗೌರವ ಇದು ಎಂದು ಹೇಳಿದರು.

ನಾವಷ್ಟೇ ಶ್ರೇಷ್ಠ ಎಂಬ ಆತ್ಮರತಿಯೂ ಇರಬಾರದು. ವಿವಿಧ ಕಾರಣಗಳಿಗೆ ಸಮೂಹ ಸನ್ನಿಯೊಂದು ನಮ್ಮನ್ನು ಆವರಿಸುತ್ತಿದೆ. ಇದು ವಿವೇಕವನ್ನು ಕಳೆದು, ಭಾವೋದ್ವೇಗವನ್ನು ಸೃಷ್ಟಿಸುತ್ತಿದೆ. ಉನ್ಮಾದವು ಸಂವಾದವನ್ನು ನುಂಗಿ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಬಾನು ಅವರಿಗೆ ಸಂದ ಪ್ರಶಸ್ತಿ ಕನ್ನಡದ ವಿವೇಕಕ್ಕೆ ಸಂದ ಪ್ರಶಸ್ತಿ ಎಂದು ಹೇಳಿದರು.

ಕವಿರಾಜಮಾರ್ಗ ಕನ್ನಡದಲ್ಲಿ ಲಭ್ಯವಾದ ಮೊದಲ ಗ್ರಂಥ. ಕ್ರಿ.ಶ. 850 ರಲ್ಲಿ ಕನ್ನಡದ ಒಬ್ಬ ದಾರ್ಶನಿಕ ಆಡಿದ ಮಾತು ಈಗಲೂ ಪ್ರಸ್ತುತವಾಗಿದೆ. ಇದು ಶೋಚನೀಯವೂ ಹೌದು, ಸಂತಸದ ಸಂಗತಿಯು ಹೌದು. ಸಹಿಷ್ಣುತೆ, ಸೌಹಾರ್ದ ಇಂದು ಬೇಕಾಗಿದೆ. ಪಂಪನು ಮನುಷ್ಯ ಜಾತಿ ತಾನೊಂದು ವಲಂ ಎಂದು ಹೇಳಿದೆ. ಎಲ್ಲವನ್ನೂ ಸಹಿಸುವ ಪ್ರಜಾಸತ್ತಾತ್ಮಕ ಮಾರ್ಗದಿಂದ ಕನ್ನಡದ ವಿವೇಕವನ್ನು ವಿಸ್ತರಿಸಲು ಸಾಧ್ಯ ಎಂದು ತಿಳಿಸಿದರು.

ಈ ಪ್ರಶಸ್ತಿ ಪಡೆಯಲು ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಇಬ್ಬರೂ ಬಹುಮುಖ್ಯ. ಬಾನು ಮುಷ್ತಾಕ್ ಅವರು ಕನ್ನಡಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟಿದ್ದಾರೆ. ಇದನ್ನು ಅನುವಾದ ಮಾಡುವ ಮೂಲಕ ಜಗತ್ತಿಗೆ ಪರಿಚಯಿಸಿದ್ದು ದೀಪಾ ಭಾಸ್ತಿ. ಇವರಿಬ್ಬರೂ ಸೇರಿ ಕನ್ನಡದ ಕೀರ್ತಿಯನ್ನು ಜಗತ್ತಿನಲ್ಲಿ ಬೆಳಗುವ ಕೆಲಸ ಮಾಡಿದ್ದಾರೆ. ಬಾನು ಮುಷ್ತಾಕ್ ಬರೆಯದಿದ್ದರೆ, ದೀಪಾ ಭಾಷಾಂತರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ದೀಪಾ ಅನುವಾದ ಮಾಡದಿದ್ದರೆ, ಬೂಕರ್ ಪ್ರಶಸ್ತಿ ಬರುತ್ತಿರಲಿಲ್ಲ. ದೀಪಾ ಭಾಸ್ತಿ ಕನ್ನಡ ಸೊಗಡನ್ನು ಬಿಡದೇ ಅನುವಾದ ಮಾಡಿರುವುದು ಮತ್ತೊಂದು ವಿಶೇಷ. ಅದು ಭಾಷಾಂತರವಲ್ಲ, ಬದಲಿಗೆ ಅದೊಂದು ಭಾವಾಂತರವಾಗಿದೆ. ಹೀಗಾಗಿ ಇಬ್ಬರನ್ನೂ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಿರುವುದು ಕನ್ನಡದ ವಿವೇಕದ ಪ್ರತೀಕ ಎಂದು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ ಹಲವು ಪ್ರಕಾರಗಳಿವೆ. ಆದರೆ, ಬದುಕಿನ ಆಳವಾದ ತಲ್ಲಣವನ್ನು ನಿರ್ದಿಷ್ಟವಾದ ಸಾಮಾಜಿಕ, ಆರ್ಥಿಕ ಸನ್ನಿವೇಶದಲ್ಲಿ ಪರೀಕ್ಷೆ ಮಾಡಿ, ಹೊಸದನ್ನು ಅನಾವರಣ ಮಾಡುವುದು ವಿಶೇಷ. ಅದು ಬಾನು ಮುಷ್ತಾಕ್ ಅವರ ವಿಶೇಷತೆ. ಕನ್ನಡ ಸಾಹಿತ್ಯಕ್ಕೆ ಹೊಸ ರೀತಿಯ ಅಭಿವ್ಯಕ್ತಿ ವಿಧಾನ ಕೊಡುತ್ತಾ ಹೋಗುತ್ತಿದ್ದಾರೆ ಎಂದರು.

ಬಂಡಾಯ ಸಾಹಿತ್ಯ ಚಳವಳಿಯನ್ನು ಬಾನು ಮುಷ್ತಾಕ್ ಮತ್ತೆ ಮತ್ತೆ ಪ್ರಸ್ತಾಪಿಸಿದ್ದಾರೆ. ಬಂಡಾಯ ಸಾಹಿತ್ಯ ಚಳವಳಿಗಳ ಬಗ್ಗೆ ಬಾನು ಮುಷ್ತಾಕ್ ಅಭಿಮಾನ ಹೊಂದಿರುವುದು ಬಹಳ ವಿಶೇಷ. ಸೈದ್ಧಾಂತಿಕ ಸ್ಪಷ್ಟನೆ ಕೊಟ್ಟವರು ಬರಗೂರು ರಾಮಚಂದ್ರ ಎಂದು ಬಾನು ಮುಷ್ತಾಕ್ ಅವರು ಹೇಳಿರುವುದು ಅವರ ದೊಡ್ಡತನ. ಈ ಪ್ರಶಸ್ತಿ ಚಳವಳಿಗಳು ಹಾಗೂ ಬಂಡಾಯ ಸಾಹಿತ್ಯ ಸಿಕ್ಕ ಗೌರವ ಎಂದು ಹೇಳಿದರು.

ಮುಸ್ಲಿಂ ಸಂವೇದನೆಯ ಜೊತೆಗೆ ಸ್ತ್ರೀಯರ ಸಂವೇದನೆಯನ್ನು ಬಾನು ಮುಷ್ತಾಕ್ ತೆರೆದಿಟ್ಟಿದ್ದಾರೆ. ಇದು ಈ ದೇಶದ ಮಹಿಳೆ ಅನುಭವಿಸುತ್ತಿರುವ ಸಂಕಟಗಳ ಅನಾವರಣವಾಗಿದ್ದು, ಸ್ತ್ರೀ ಸಂಕಟದ ಪ್ರತಿನಿಧಿಕರಣ ಎಂದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ, ಕನ್ನಡಿಗರಿಗೆ, ಹಾಸನಕ್ಕೆ, ಇಡೀ ರಾಜ್ಯ ಹಾಗೂ ದೇಶಕ್ಕೆ ಸಂಭ್ರಮದ ಕ್ಷಣ. ಕನ್ನಡ ಸಾಹಿತ್ಯದ ಕೃತಿಗಳ ಸರಿಯಾದ ಭಾಷಾಂತರವಾದರೆ, ಇಡೀ ಕನ್ನಡದ ಸೊಗಡು ಜಗತ್ತಿಗೆ ಪರಿಚಯವಾಗುತ್ತದೆ. ಕನ್ನಡಕ್ಕೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಬರಲಿ ಎಂದರು.

ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಎಸ್ಪಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.