ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ, ಕಾಫಿಮಂಡಳಿ, ತೋಟಗಾರಿಕೆ ಹಾಗೂ ಕೃಷಿಇಲಾಖೆಗಳು ಜಂಟಿ ಸರ್ವೆ ನಡೆಸಿ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ನಿಂದ ಪ್ರತಿ ಹೆಕ್ಟೇರ್‌ಗೆ ₹60ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಮಳೆಯಿಂದ ಕಾಫಿ ಗಿಡದಲ್ಲಿ ಕೋಳೆರೋಗ ಕಾಣಿಸಿಕೊಂಡಿದೆ, ಶೇ 60 ರಷ್ಟು ಫಸಲು ಉದುರಿ, ಹಾನಿಯಾಗಿದೆ, ಕಾಳುಮೆಣಸು ಬಳ್ಳಿಗಳು ಸಹ ನೆಲಕಚ್ಚಿವೆ. ಭತ್ತ, ಅಡಿಕೆ ಬೆಳೆಗಳು ನಾಶವಾಗಿವೆ ಎಂದರು.