ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತನಾಟ್ಯ ಪಾರಂಪರಿಕ ಕಲೆ: ಅಂಬಳೆ ರಾಜೇಶ್ವರಿ

Published 21 ಅಕ್ಟೋಬರ್ 2023, 12:40 IST
Last Updated 21 ಅಕ್ಟೋಬರ್ 2023, 12:40 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಭರತನಾಟ್ಯ ಪಾರಂಪರಿಕ ಕಲೆ ಎಂದು ಹಾಸನದ ಭಾರತೀಯ ಸಂಗೀತ ನೃತ್ಯ ಶಾಲೆಯ ಕಲಾವಿದೆ ಅಂಬಳೆ ರಾಜೇಶ್ವರಿ ಹೇಳಿದರು.

ಪಟ್ಟಣದ ವಾಸವಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಸುಪ್ರದಾ ಅಕಾಡೆಮಿಯ ಕಲಾಸಂಘದ ವತಿಯಿಂದ ಏರ್ಪಡಿಸಿದ್ದ ನೃತ್ಯ ಚಿಗುರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭರತನಾಟ್ಯ ಮನರಂಜನೆ ಮಾತ್ರವಾಗಿರದೆ ಮನೋವಿಕಾಸಕ್ಕೆ ಅವಕಾಶ ನೀಡುತ್ತದೆ. ಜನಪದನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಕಲೆಯನ್ನು ಆರಾಧಿಸಬೇಕು. ಪರಿಶ್ರಮ, ಶ್ರದ್ಧಾ, ಭಕ್ತಿಯಿಂದ ನೃತ್ಯ  ಅಭ್ಯಸಿಸಿದರೆ ಗುರಿ ಸಾಧಿಸಬಹುದು ಎಂದರು.

ಮೇದಿನಿ ನೃತ್ಯ ನಿಕೇತನದ ಕಲಾವಿದೆ ಭಾನು ಮಾತನಾಡಿದರು. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಸಿ.ಕೆ. ಬಾಬು ಇದ್ದರು.


ಪುಟಾಣಿ ಕಲಾವಿದರಾದ ಮಾನ್ಯಾ, ಲಾಸ್ಯಾ, ವಿಸ್ಮಿತಾ, ಪ್ರಾಂಜಲಿ ಹಾಗೂ ನಾಗಶ್ರೀ, ನೃತ್ಯ  ಪ್ರದರ್ಶಿಸಿದರು. ಕಲಾವಿದೆ ರಮ್ಯಾ ಗಾಯನ, ಗುರುಮೂರ್ತಿ, ಎಸ್. ಸುಯೋಗ್ ಮತ್ತು ಚಿನ್ಮಯಿ ಪಕ್ಕ ವಾದ್ಯ ನುಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT