ಹಾಸನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಹಾಸನ ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಇಲ್ಲಿನ ಹೇಮಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.

ಉದ್ಘಾಟಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಸಚಿವ ಬಿ.ಎ. ಜಗದೀಶ, ರೆಡ್ ಕ್ರಾಸ್ ಸಂಸ್ಥೆ ಹಾಸನದಲ್ಲಿ ನಿತ್ಯ ಬಹಳಷ್ಟು ಮಾನವೀಯ ಚಟುವಟಿಕೆ ನಡೆಸುತ್ತಿದೆ ಎಂದು ತಿಳಿಸಿದರು.

ಕುಲಪತಿ ಪ್ರೊ. ಟಿ.ಸಿ. ತಾರನಾಥ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಡಾ.ವೈ.ಎಸ್. ವೀರಭದ್ರಪ್ಪ, ನಿರ್ದೇಶಕ ಎಸ್.ಎಸ್ ಪಾಷಾ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ಖಜಾಂಚಿ ಜಯೇಂದ್ರಕುಮಾರ್, ನಿರ್ದೇಶಕರಾದ ಉದಯ್ ಕುಮಾರ್, ಡಾ.ಕಾವ್ಯಾ, ಭೀಮರಾಜ್ ಹಾಜರಿದ್ದರು. ಯುವ ರೆಡ್ಕ್ರಾಸ್ ಸಂಯೋಜಕ ಡಾ.ಬಿ.ಎಸ್. ರವಿಕುಮಾರ ನಿರೂಪಿಸಿದರು.

ಹಾಸನ ಜೀವಸಂಜೀವಿನಿ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಬಿ.ಎಂ. ರವಿಕುಮಾರ್ ರಕ್ತ ಸಂಗ್ರಹಣೆ ಮಾಡಿದರು. 29 ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರೆಡ್ ಕ್ರಾಸ್ ಚಿಹ್ನೆ ಗುರುತಿನ 50 ಕೀ ಚೈನ್ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.