ಹಾಸನ: ಬೆಂಗಳೂರಿನಲ್ಲಿ ನಡೆದ ಭಾರತೀಯ ಕಾಫಿ ರೈತರ ಒಕ್ಕೂಟದ (ಸಿಎಫ್ಎಫ್ಐ) ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಇಲ್ಲಿನ ಎಚ್.ಆರ್. ನವೀನ್ ಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಹೆಚ್ಚುತ್ತಿರುವ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ತಡೆ, ಕಾರ್ಪೊರೇಟ್ ಲೂಟಿಯಿಂದ ಕಾಫಿ ಬೆಳೆಗಾರರು ಮತ್ತು ತೋಟದ ಕಾರ್ಮಿಕರ ರಕ್ಷಣೆ, ಸಹಕಾರಿ ಕಾಫಿ ಯೋಜನೆಗೆ ಒತ್ತಾಯ ಹಾಗೂ ಕಾಫಿ ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಫೆಬ್ರುವರಿ 20 ರಿಂದ 25 ವರೆಗೆ ಎಲ್ಲ ಕಾಫಿ ಬೆಳೆಯುವ ಗ್ರಾಮಗಳಲ್ಲಿ ಅಭಿಯಾನ ಆಯೋಜಿಸಲಾಗಿದೆ. ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಿ ಸಹಿ ಸಂಗ್ರಹ, ಸಾರ್ವಜನಿಕ ಸಭೆಗಳು ಮತ್ತು ವಿಚಾರ ಸಂಕಿರಣ ಆಯೋಜಿಸಲಾಗುವುದು. ಕಾಫಿ ಬೆಳೆಯುವ ರಾಜ್ಯಗಳ ಆಯಾಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಕಾಫಿ ಬೆಳೆಯುವ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದ್ದು, ಕಾಫಿ ಬೆಳೆ ಹಾಳಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆನೆಗಳ ದಾಳಿಯಿಂದಾಗಿ ಬೆಳೆಗಾರರು ಮತ್ತು ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಬೆಳೆ ಮತ್ತು ಪ್ರಾಣ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.

ನಾಲ್ಕು ವರ್ಷಗಳಲ್ಲಿ ಕಾಫಿ ಬೆಲೆ ಹೆಚ್ಚಾಗಿದೆ. 2020-21ರಲ್ಲಿ ಒಂದು ಕೆ.ಜಿ. ರೋಬಸ್ಟ ಕಾಫಿ ₹66.06 ಇತ್ತು. 2021-22ರಲ್ಲಿ ₹89.60, 2022-23ರಲ್ಲಿ ₹107.80, 2023-24ರಲ್ಲಿ ₹ 153.20 ರಿಂದ ₹212 ಮತ್ತು 2024-25ರಲ್ಲಿ ₹221 ರಿಂದ ₹285 ಕ್ಕೆ ಏರಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಬೆಲೆ 47 ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ ಎಂದು ತಿಳಿಸಲಾಯಿತು.

ರೈತರು ಮಾರುಕಟ್ಟೆ ಅನಿಶ್ಚಿತತೆ ಮತ್ತು ಶೋಷಣೆಗೆ ಒಳಗಾಗಬಹುದು ಎಂದು ಸಣ್ಣ ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಕಡಿಮೆ ಉತ್ಪಾದನೆ ಆಗಿದ್ದು, ಬೆಲೆ ಏರಿಕೆಯಿಂದ ಸಣ್ಣ ಕಾಫಿ ಬೆಳೆಗಾರರಿಗೆ ಲಾಭವಾಗುವುದಿಲ್ಲ. ಕಾಫಿ ಬೆಳೆಯುವ ಪ್ರದೇಶದ ರಾಜ್ಯ ಸರ್ಕಾರಗಳು ಮತ್ತು ಭಾರತೀಯ ಕಾಫಿ ಮಂಡಳಿಯು ಕಾಫಿ ರೈತರ ಉತ್ಪಾದಕ ಸಹಕಾರ ಸಂಘಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕಾಫಿ ಕೃಷಿ ಮತ್ತು ಉದ್ಯಮಕ್ಕೆ ಪರ್ಯಾಯ ನೀತಿ ಅಳವಡಿಸಿಕೊಳ್ಳುವ ಮೂಲಕ ಸಣ್ಣ ರೈತರನ್ನು ರಕ್ಷಿಸಲು ಮುಂದಾಗಬೇಕಿದೆ ಎಂದು ಆಗ್ರಹಿಸಲಾಯಿತು.

ಬೀಜ ಮಸೂದೆ 2025, ವಿದ್ಯುತ್ ಮಸೂದೆ 2025 ಮತ್ತು ವಿಬಿ ರಾಮ್ಜಿ ಕಾಯ್ದೆ 2025 ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಜನವರಿ 16 ರಂದು ಅಖಿಲ ಭಾರತ ಪ್ರತಿರೋಧ ದಿನ ಆಚರಿಸುತ್ತಿದ್ದು, 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಫೆ. 12 ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇದನ್ನು ಯಶಸ್ವಿಗೊಳಿಸಲು ಸಭೆ ನಿರ್ಧರಿಸಿತು.

ಉಪಾಧ್ಯಕ್ಷ ಡಿ.ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪಿ ಕೃಷ್ಣಪ್ರಸಾದ್ ವರದಿ ಮತ್ತು ಮುಂದಿನ ಕ್ರಿಯಾಯೋಜನೆ ಮಂಡಿಸಿದರು. ಎಐಕೆಎಸ್ ಉಪಾಧ್ಯಕ್ಷ ಇಂದ್ರಜಿತ್ ಸಿಂಗ್, ಕೇರಳ ರೈತ ಸಂಘದ ಜಂಟಿ ಕಾರ್ಯದರ್ಶಿ, ಕಾರ್ಯದರ್ಶಿ ವಲ್ಸನ್ ಪನೋಲಿ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ಬಸವರಾಜ್, ಕಾರ್ಯದರ್ಶಿ ಟಿ. ಯಶವಂತ, ಡಾ.ಐ.ಆರ್. ದುರ್ಗಾ ಪ್ರಸಾದ್, ತಮಿಳುನಾಡಿನ ಎ. ಯೋಹಾನನ್, ಚೆಲ್ಲಯ್ಯ, ಸಿ. ಅಣ್ಣಾಮಲೈ, ಆಂಧ್ರಪ್ರದೇಶದ ಜೆಮಿಲಿ ಚಿನ್ನ ಬಾಬು, ಪಲಿಕಿ ಲಖು, ಕೇರಳದ ಜಸ್ಟಿನ್ ಬಾಬು, ಜೈನ್ ಆಂತೊಣಿ, ಕೆ.ಆರ್.ಜುಬುನು ಹಾಜರಿದ್ದರು.