ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧಿವೃತ್ತ ಅಭಿವೃದ್ಧಿಗೆ ₹25 ಲಕ್ಷ ವೆಚ್ಚ: ಶಾಸಕ ಸಿ.ಎನ್. ಬಾಲಕೃಷ್ಣ

Published : 2 ಅಕ್ಟೋಬರ್ 2024, 13:53 IST
Last Updated : 2 ಅಕ್ಟೋಬರ್ 2024, 13:53 IST
ಫಾಲೋ ಮಾಡಿ
Comments

ಚನ್ನರಾಯಪಟ್ಟಣ: ದೇಶ ಕಟ್ಟಲು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್‌ ಶಾಸ್ತ್ರಿ ಅವರ ಕೊಡುಗೆ ಅಪಾರ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ತಾಲ್ಲೂಕು ಅಡಳಿತ  ಬುಧವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಮತ್ತು  ಲಾಲ್ ಬಹದ್ದೂರ್‌ ಶಾಸ್ತ್ರಿ ಜನ್ಮದಿನಾಚರಣೆಯಲ್ಲಿ ಅವರು  ಮಾತನಾಡಿದರು. 

ಪಟ್ಟಣದ ಗಾಂಧೀಜಿ ವೃತ್ತವನ್ನು ₹25 ಲಕ್ಷ ವೆಚ್ಚದಲ್ಲಿ ಪುರಸಭೆಯಿಂದ ಅಭಿವೃದ್ಧಿಪಡಿಸಲಾಗುವುದು ಎಂದರು.  

ತಹಶೀಲ್ದಾರ್ ವಿ.ಎಸ್. ನವೀನ್‍ಕುಮಾರ್, ಪುರಸಭಾಧ್ಯಕ್ಷೆ ಕೆ.ಎನ್. ಬನಶಂಕರಿ ಮಾತನಾಡಿದರು. ಅರ್ಚಕ ಬಾಲಕೃಷ್ಣಭಟ್, ಫಾ. ಜರೋಮ್, ಮುನಾವರ್ ಪಾಷ ಅವರನ್ನು ಸನ್ಮಾನಿಸಲಾಯಿತು.

ಪುರಸಭೆಯ ಸ್ಥಾಯಿಸಮಿತಿ ಅಧ್ಯಕ್ಷ ಸಿ.ಆರ್. ಸುರೇಶ್, ಮುಖ್ಯಾಧಿಕಾರಿ ಕೆ.ಎನ್. ಹೇಮಂತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಡಿವೈಎಸ್‍ಪಿ ರವಿಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎನ್. ಲೋಕೇಶ್, ಸರ್ಕಾರಿನೌಕರ ಸಂಘದ ಅಧ್ಯಕ್ಷ ಟಿ. ಮಂಜಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT