ಮಂಗಳವಾರ, ಮಾರ್ಚ್ 28, 2023
31 °C
ಜಿ.ಪಂ ಅಧ್ಯಕ್ಷೆ ಅಧಿಕಾರವಧಿಯಲ್ಲಿ ಅಕ್ರಮ: ಎಚ್‌.ಪಿ. ಸ್ವರೂಪ್‌ ಆರೋಪ

ಸಿಒಡಿ ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಅಧಿಕಾರವಧಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಒಡಿ ತನಿಖೆ ನಡೆಸಬೇಕು’ ಎಂದು ಉಪಾಧ್ಯಕ್ಷ ಎ.ಪಿ.ಸ್ವರೂಪ್‌ ಆಗ್ರಹಿಸಿದರು.

‘ಕಚೇರಿಯ ಲಿಫ್ಟ್ ಅಳವಡಿಕೆ, ಪ್ರವಾಸ ಭತ್ಯೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಸರ್ಕಾರಕ್ಕೆ ವರದಿ ನೀಡಿ, ಸಿಒಡಿ ತನಿಖೆ ನಡೆಸಬೇಕು. ಸಾರ್ವಜನಿಕ ತೆರಿಗೆ ಹಣ
ಪೋಲಾಗುವುದು ಸರಿಯಲ್ಲ ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಧ್ಯಕ್ಷರ ವಿವೇಚನಾ ಕೋಟಾದಡಿ ಬಿಡುಗಡೆಯಾದ ಅನುದಾನವನ್ನು ತಮಗೆ ಇಷ್ಟ ಬಂದಂತೆ ಬಳಸಿದ್ದಾರೆ.
ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹10 ಲಕ್ಷ ಹಂಚಿಕೆ ಮಾಡುವ ಕುರಿತು ಶಾಸಕರ ಸಭೆಯಲ್ಲಿ ತೀರ್ಮಾನಿಸಿದ್ದರೂ
ಅಧಿಕಾರಿಗಳನ್ನು ಹೆದರಿಸಿ ಅದಕ್ಕೆ ತಡೆಯೊಡ್ಡಿದ್ದಾರೆ. ಕನಿಷ್ಟ ಪ್ರತಿ ಸದಸ್ಯರಿಗೆ ಎರಡು ಲಕ್ಷ ರೂಪಾಯಿ ಅನುದಾನ
ನೀಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ಸೆ.5 ರ ಶಿಕ್ಷಕರ ದಿನಾಚರಣೆಯಂದು ಸರ್ಕಾರಿ ರಜೆ ಎಂದು ತಿಳಿದಿದ್ದರೂ ಉದ್ದೇಶ ಪೂರ್ವಕವಾಗಿ ಜಿಲ್ಲಾ ಪಂಚಾಯಿತಿ
ವಿಶೇಷ ಸಭೆ ದಿನಾಂಕ ನಿಗದಿ ಮಾಡಲಾಗಿದೆ. ಶಿಕ್ಷಕರ ದಿನಾಚರಣೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿಯೂ ಕಾರ್ಯಕ್ರಮಗಳು
ನಡೆಯುತ್ತವೆ. ಶಾಸಕರು, ಸದಸ್ಯರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಡ್ಡಾಯ. ಇದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ’ ಎಂದು ವಿವರಿಸಿದರು.

‘ಅಧ್ಯಕ್ಷರು ಪ್ರತಿ ಬಾರಿ ವಿಶೇಷ ಸಭೆ ಕರೆಯುವ ಬದಲಿಗೆ ಸಾಮಾನ್ಯ ಸಭೆ ನಿಗದಿಪಡಿಸಿದರೆ ಹಾಜರಾಗಲು ಸಿದ್ಧ. ಇಂದಿನ ಸಭೆಗೆ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಗೈರಾಗಿದ್ದಾರೆ’ ಎಂದು ಹೇಳಿದರು.‌ ಜಿಲ್ಲಾ ಪಂಚಾಯಿತಿ ಸದಸ್ಯ ಲೋಕೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು